ವೋಟರ್ ಲಿಸ್ಟ್ ನಿಂದ ಕೋಕ್: ಮತದಾನ ವಂಚಿತರಾದ ದ್ವಾರಕ ಜಿಲ್ಲೆಯ 575 ಮುಸ್ಲಿಂ ಮೀನುಗಾರರು - Mahanayaka

ವೋಟರ್ ಲಿಸ್ಟ್ ನಿಂದ ಕೋಕ್: ಮತದಾನ ವಂಚಿತರಾದ ದ್ವಾರಕ ಜಿಲ್ಲೆಯ 575 ಮುಸ್ಲಿಂ ಮೀನುಗಾರರು

06/05/2024

ಗುಜರಾತ್ ನ ಗಾಂಧಿನಗರದ ದೇವ್ ಭೂಮಿ ದ್ವಾರಕ ಜಿಲ್ಲೆಯ 575 ಮುಸ್ಲಿಂ ಮೀನುಗಾರರನ್ನು ಮತದಾರ ಪಟ್ಟಿಯಿಂದ ಕೈ ಬಿಟ್ಟಿರುವುದಾಗಿ ವರದಿಯಾಗಿದೆ. ಬಂದರು ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಹೆಸರಲ್ಲಿ ಕಳೆದ ವರ್ಷ ಇವರ ಮನೆಗಳನ್ನು ಕಿತ್ತುಹಾಕಲಾಗಿತ್ತು. ಇವರು ದ್ವಾರಕಾ ವಿಧಾನಸಭಾ ಕ್ಷೇತ್ರದಲ್ಲಿ ವರ್ಷಗಳಿಂದ ಮತದಾನ ಮಾಡುತ್ತಿದ್ದಾರೆ.

ನವಗ್ರಹ ಎಂಬ ಗ್ರಾಮದಲ್ಲೂ ಮುಸ್ಲಿಂ ಮೀನುಗಾರರ ಮನೆಯನ್ನು ಧ್ವಂಸಗೊಳಿಸಲಾಗಿತ್ತು. ವರ್ಷಗಳಿಂದ ಇವರು ಕೂಡ ದ್ವಾರಕಾ, ಅಸೆಂಬ್ಲಿ ಕ್ಷೇತ್ರದಲ್ಲಿ ವಾಸಿಸುತ್ತಿದ್ದಾರೆ ಮತ್ತು ಇಲ್ಲಿಯ ಮತದಾರರಾಗಿಯೂ ಗುರುತಿಸಿಕೊಂಡಿದ್ದಾರೆ.

ಆದರೆ ಈ ಬಾರಿ ಇಲ್ಲಿಯ 225 ಮುಸ್ಲಿಂ ಮತದಾರರನ್ನು ಮತದಾನ ಪಟ್ಟಿಯಿಂದ ಕಿತ್ತು ಹಾಕಲಾಗಿದೆ. ಅಲ್ಲದೆ ಇವರನ್ನು ಬೇರೆ ಕ್ಷೇತ್ರದ ಮತದಾನ ಪಟ್ಟಿಯಲ್ಲಿ ಸೇರಿಸಿಯೂ ಇಲ್ಲ. ತಮ್ಮನ್ನು ಬಲವಂತದಿಂದ ಒಕ್ಕಲೆಬ್ಬಿಸಲಾಗಿದೆ ಎಂದು ಈ ಮೀನುಗಾರರು ಹೇಳುತ್ತಾರೆ. ಪುನರ್ವಸತಿ ಕಲ್ಪಿಸಬೇಕೆಂಬ ಇವರ ಅರ್ಜಿ ಈಗ ಗುಜರಾತ್ ಹೈಕೋರ್ಟಿನ ಪರಿಗಣನೆಯಲ್ಲಿದೆ. ಅನಧಿಕೃತ ಕಟ್ಟಡಗಳು ಎಂಬ ನೆಲೆಯಲ್ಲಿ ಅವನ್ನು ಕೆಡವಿ ಹಾಕಲಾಗಿದೆ. ಇವರ ಮನೆ ಕೆಡುವುದಕ್ಕಿಂತ ಕೆಲವೇ ಸಮಯಗಳ ಮೊದಲು ನಿಮ್ಮ ಮನೆಯನ್ನು ಕೆಡಲಾಗುತ್ತದೆ ಎಂಬ ನೋಟಿಸ್ ಅನ್ನು ನೀಡಲಾಗಿದೆ. ಅದು ಎಷ್ಟು ದಿಢೀರ್ ಆಗಿತ್ತೆಂದರೆ ಮನೆಯಲ್ಲಿರುವ ಸಾಮಾನುಗಳನ್ನು ಕೂಡ ಅವರಿಗೆ ಕೊಂಡು ಹೋಗಲು ಸಾಧ್ಯವಾಗಿಲ್ಲ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ