ಸೌದಿ ಅರೇಬಿಯಾದಲ್ಲಿ ಹೃದಯ ರೋಗಿಗಳ ಸಂಖ್ಯೆಯಲ್ಲಿ ಭಾರೀ ಏರಿಕೆ..! - Mahanayaka

ಸೌದಿ ಅರೇಬಿಯಾದಲ್ಲಿ ಹೃದಯ ರೋಗಿಗಳ ಸಂಖ್ಯೆಯಲ್ಲಿ ಭಾರೀ ಏರಿಕೆ..!

06/05/2024

ಸೌದಿಯಲ್ಲಿ ಹೃದಯ ರೋಗಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಸೌದಿಯ ಒಟ್ಟು ಮರಣಗಳ ಪೈಕಿ 45 ಶೇಕಡ ಮರಣಕ್ಕೂ ಹೃದಯಘಾತವೇ ಕಾರಣವಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಹೃದಯ ಸಂಬಂಧಿ ಕಾಯಿಲೆಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ ಎಲೆಕ್ಟ್ರಾನಿಕ್ ಉಪಕರಣಗಳನ್ನು ತಯಾರುಗೊಳಿಸಿ ಈ ಮೊದಲೇ ಹಂಚಿಕೆ ಮಾಡಲಾಗಿತ್ತು. ಹೀಗೆ ಹಂಚಿಕೆ ಮಾಡಿದ 3000 ಮಂದಿಯ ಮಾಹಿತಿಗಳನ್ನು ಕಲೆ ಹಾಕಿದಾಗ 15 ಶೇಕಡ ಮಂದಿಗೆ ಹೃದಯ ಸಂಬಂಧಿ ಕಾಯಿಲೆ ಇರುವುದನ್ನು ಪತ್ತೆಹಚ್ಚಲಾಗಿದೆ ಎಂದು ತಿಳಿದು ಬಂದಿದೆ.

ಆಲಿವ್ ಎಣ್ಣೆ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆಂಬ ಪ್ರಚಾರದಲ್ಲಿ ಸತ್ಯವಿಲ್ಲ. ಆಲಿವ್ ಎಣ್ಣೆಯನ್ನು ನಿರಂತರ ಬಳಸುತ್ತಿರುವವರಲ್ಲಿ ನಡೆಸಲಾದ ಪರೀಕ್ಷೆಯ ಬಳಿಕ ಈ ಸತ್ಯಾಂಶವನ್ನು ಕಂಡುಕೊಳ್ಳಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಮುಖ್ಯವಾಗಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು ನಿರಂತರವಾಗಿ ಆಲಿವ್ ಎಣ್ಣೆಯನ್ನು ಬಳಸಿರುವವರಾಗಿದ್ದಾರೆ ಎಂದು ಕೂಡ ವೈದ್ಯಕೀಯ ವರದಿಗಳು ತಿಳಿಸಿವೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ