ಹಲ್ಲೆ ಆರೋಪ: ಸಂಸದೆ ಸ್ವಾತಿ ಹಾಗೂ ಎಎಪಿ ನಾಯಕರ ನಡುವೆ ವಾಗ್ಯುದ್ದ - Mahanayaka

ಹಲ್ಲೆ ಆರೋಪ: ಸಂಸದೆ ಸ್ವಾತಿ ಹಾಗೂ ಎಎಪಿ ನಾಯಕರ ನಡುವೆ ವಾಗ್ಯುದ್ದ

18/05/2024

ಅರವಿಂದ್ ಕೇಜ್ರಿವಾಲ್‌ರ ಆಪ್ತ ಬಿಭವ್ ಕುಮಾರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ವಾತಿ ಮಲಿವಾಲ್ ಆರೋಪಿಸಿದ್ದರು. ಈ ವಿಷಯದಲ್ಲಿ ಸಂಸದೆ ಸ್ವಾತಿ ಮಲಿವಾಲ್‌ ಮತ್ತು ಆಮ್‌ ಆದ್ಮಿ ಪಾರ್ಟಿಯ ನಾಯಕರ ನಡುವೆ ವಾಗ್ಯುದ್ಧ ನಡೆಯುತ್ತಿದೆ. ಕೇಜ್ರಿವಾಲ್‌ರ ನಿವಾಸದಿಂದ ಸ್ವಾತಿ ಮಲಿವಾಲ್ ನಿರ್ಗಮಿಸುತ್ತಿರುವ ಹೊಸ ವಿಡಿಯೊವನ್ನು ಮುಖ್ಯಮಂತ್ರಿಗಳ ನಿವಾಸ ಬಿಡುಗಡೆ ಮಾಡಿದೆ. ನಾನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರ ನಿವಾಸಕ್ಕೆ ತೆರಳಿದ್ದಾಗ ಅವರ ಆಪ್ತ ಬಿಭವ್ ಕುಮಾರ್ ನನ್ನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದರು. ಬಿಭವ್ ಕುಮಾರ್ ನನಗೆ ಗುದ್ದಿದರು, ಒದ್ದರು ಹಾಗೂ ನಿಂದಿಸಿದರು. ಈ ಸಂದರ್ಭದಲ್ಲಿ ನನ್ನ ಬಟ್ಟೆಗಳು ಹರಿದು ಹೋದವು ಹಾಗೂ ಹಲ್ಲೆಯಿಂದಾಗಿ ನನ್ನ ತಲೆ ಹಾಗೂ ಕಾಲಿಗೆ ತೀವ್ರ ಪೆಟ್ಟಾಯಿತು ಎಂದು 39 ವರ್ಷದ ಸ್ವಾತಿ ಮಲಿವಾಲ್ ಆರೋಪಿಸಿದ್ದಾರೆ.


Provided by

ಆದರೆ, ಈಗ ಬಿಡುಗಡೆಯಾಗಿರುವ ಹೊಸ ವಿಡಿಯೊ ದೃಶ್ಯಾವಳಿಯಲ್ಲಿ, ಸ್ವಾತಿ ಮಲಿವಾಲ್‌ಗೆ ಯಾವುದೇ ಗಾಯವಾಗಿರುವಂತೆ ಕಂಡು ಬಂದಿಲ್ಲ ಹಾಗೂ ಅವರು ಮಹಿಳಾ ಪೊಲೀಸರ ಹಿಡಿತದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದು ಕಂಡು ಬಂದಿದೆ.

 


Provided by

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ