ರೇಣುಕಾಸ್ವಾಮಿಗಿತ್ತು ಈ ಗೀಳು: ಸ್ಕ್ರೀನ್ ಟೈಂ ಪರಿಶೀಲನೆ ವೇಳೆ ಅಚ್ಚರಿಯ ಮಾಹಿತಿ ಬಯಲು - Mahanayaka
6:57 PM Thursday 25 - December 2025

ರೇಣುಕಾಸ್ವಾಮಿಗಿತ್ತು ಈ ಗೀಳು: ಸ್ಕ್ರೀನ್ ಟೈಂ ಪರಿಶೀಲನೆ ವೇಳೆ ಅಚ್ಚರಿಯ ಮಾಹಿತಿ ಬಯಲು

renuka swamy
16/06/2024

ದರ್ಶನ್  ಹಾಗೂ ತಂಡ ಕೊಲೆ ಮಾಡಿದೆ ಎನ್ನಲಾಗಿರುವ ರೇಣುಕಾಸ್ವಾಮಿ ಸಾಮಾಜಿಕ ಜಾಲತಾಣದ ಗೀಳು ಅಂಟಿಸಿಕೊಂಡಿದ್ದ ಎನ್ನಲಾಗಿದೆ.  ವರದಿಗಳ ಪ್ರಕಾರ ರೇಣುಕಾಸ್ವಾಮಿ ಅತೀ ಹೆಚ್ಚು ಸಮಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುತ್ತಿದ್ದ ಎಂದು ಹೇಳಲಾಗಿದೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಫೇಸ್ ಬುಕ್, ಇನ್ ಸ್ಟಾಗ್ರಾಮ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದ ದಿನದಲ್ಲಿ 5 ಗಂಟೆಗೂ ಹೆಚ್ಚು ಸಮಯ ಸೋಶಿಯಲ್ ಮೀಡಿಯಾದಲ್ಲೇ ರೇಣುಕಾಸ್ವಾಮಿ ಕಳೆಯುತ್ತಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಗಂಟೆಗಟ್ಟಲೇ ರೀಲ್ಸ್ ಸ್ಕ್ರೋಲ್ ಮಾಡ್ತಿದ್ದ ಡಾಟಾ ಪೊಲೀಸರಿಗೆ ಪತ್ತೆಯಾಗಿದೆ. ಸ್ಕ್ರೀನ್ ಟೈಂ ಪರಿಶೀಲನೆ ಮಾಡಿದಾಗ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಅಪೋಲೊ ಫಾರ್ಮಸಿಯಲ್ಲಿ ಎಕ್ಸಿಕ್ಯೂಟಿವ್ ಆಗಿದ್ದ ರೇಣುಕಾಸ್ವಾಮಿ ಅತೀ ಹೆಚ್ಚು ಸಮಯವನ್ನು ಸೋಶಿಯಲ್ ಮೀಡಿಯಾದಲ್ಲಿ ಕಳೆಯುತ್ತಿದ್ದ. ಫೋಟೋ ವಿಡಿಯೋ ಗಳಿಗೆ ಕಾಮೆಂಟ್ಸ್ ಮಾಡುತ್ತಿದ್ದ ಎನ್ನಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ