ಕೊಲೆ ಕೇಸಲ್ಲಿ ಶಿಕ್ಷೆಗೀಡಾಗಿ ಪರೋಲ್ ಮೇಲೆ ಹೊರಬಂದ ಅಪರಾಧಿಗೆ ಸಡಗರದ ಸ್ವಾಗತ! - Mahanayaka

ಕೊಲೆ ಕೇಸಲ್ಲಿ ಶಿಕ್ಷೆಗೀಡಾಗಿ ಪರೋಲ್ ಮೇಲೆ ಹೊರಬಂದ ಅಪರಾಧಿಗೆ ಸಡಗರದ ಸ್ವಾಗತ!

21/03/2025


Provided by

ಹತ್ತು ವರ್ಷಗಳ ಹಿಂದೆ ಜಾತಿ ಆಧಾರಿತ ಹತ್ಯಾ ಪ್ರಕರಣದಲ್ಲಿ ಶಿಕ್ಷೆಗೀಡಾಗಿ ಪರೋಲ್ ಮೇಲೆ ಹೊರಬಂದ ಒಂದನೇ ಅಪರಾಧಿಯನ್ನು ಸಡಗರದಿಂದ ಸ್ವಾಗತಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. 2015 ಜೂನ್ 23 ರಂದು ಗೆಳತಿ ಸ್ವಾತಿಯ ಜೊತೆ ಮಾತಾಡ್ತಾ ಇದ್ದ ದಲಿತ ಯುವಕ ಗೋಕುಲ್ ಲನ್ನು ಈತ ಮತ್ತು ಈತನ ತಂಡ ಸೇರಿ ಹತ್ಯೆ ಮಾಡಿತ್ತು. ಗೋಕುಲ್ ಎಲೆಕ್ಟ್ರಾನಿಕ್ ಅಂಡ್ ಕಮ್ಯೂನಿಕೇಶನ್ ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದ.

ಸ್ವಾತಿಯ ಜೊತೆ ದೇವಸ್ಥಾನದಲ್ಲಿ ಮಾತಾಡ್ತಾ ಇರುವುದನ್ನು ಕಂಡ ಮೇಲ್ಜಾತಿಯ ಗುಂಪು ಗೋಕುಲನನ್ನು ಅಪಹರಿಸಿ ಕೊಂಡು ಹೋಗಿ ಆ ಬಳಿಕ ಆತನ ಮೃತ ದೇಹವನ್ನು ರೈಲ್ವೆಹಳಿಯಲ್ಲಿ ತಂದು ಬಿಸಾಕಿ ಆತ್ಮಹತ್ಯೆ ಎಂದು ಬಿಂಬಿಸಿತ್ತು.

ಸ್ವಾತಿ ಸಾಕ್ಷಿ ಹೇಳುವ ಮೂಲಕ ಇತರ ಆರೋಪಿಗಳನ್ನು ಬಂಧಿಸಲಾಗಿತ್ತು ಆದರೆ ಈ ಮುಖ್ಯ ಆರೋಪಿ ಯುವರಾಜ್ ಪತ್ತೆಯಾಗಿರಲಿಲ್ಲ. ಆತ ತಪ್ಪಿಸಿಕೊಂಡಿದ್ದ. ಈತನನ್ನು ಬಂಧಿಸಲು ಹೊರಟ ಡಿಎಸ್ಪಿ ಆ ಬಳಿಕ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು.

ಬಳಿಕ ಯುವರಾಜ್ ತನ್ನ ಬೆಂಬಲಿಗರ ಜೊತೆ ಮೆರವಣಿಗೆಯಲ್ಲಿ ಬಂದು ಪೊಲೀಸ್ ಠಾಣೆಗೆ ಶರಣಾಗತನಾಗಿದ್ದ. ತಕ್ಷಣ ಆತನಿಗೆ ಜಾಮೀನು ಲಭಿಸಿತ್ತು.

ಆತನನ್ನು ಆ ಬಳಿಕ ರಾಜನಂತೆ ಮೆರವಣಿಗೆಯಲ್ಲಿ ಕೊಂಡೋಯ್ಯಲಾಗಿತ್ತು.. 2015 ಡಿಸೆಂಬರ್ 2ರಂದು ಯುವರಾಜ್ ಮತ್ತು ಇತರ 17 ಆರೋಪಿಗಳನ್ನು ಸಿಬಿ ಸಿಐಡಿ ನ್ಯಾಯಾಲಯವು ಮರಳಿ ಕಸ್ತಡಿಗೆ ಪಡೆದುಕೊಂಡಿತು. ಯುವರಾಜ ಸಹಿತ 10 ಮಂದಿಗೆ ಜೀವನಾಂತ್ಯ ಜೈಲು ಶಿಕ್ಷೆಯನ್ನು ವಿಧಿಸಿತು. ಇದೀಗ ಯುವರಾಜನನ್ನು ಸಡಗರದಿಂದ ಸ್ವಾಗತಿಸುವ ವಿಡಿಯೋ ವೈರಲ್ ಆಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ