ಸರ್ಕಾರಿ ಡಿಡಿ ನ್ಯೂಸ್ ಗೆ ಸೇರ್ತಾರಂತೆ ಆಂಕರ್ ಸುಧೀರ್ ಚೌಧರಿ!

ಗೋದಿ ಮಿಡಿಯಾ ಆಂಕರ್ ಎಂದೇ ಕುಪ್ರಸಿದ್ಧಿಯನ್ನು ಪಡೆದಿರುವ ಸುಧೀರ್ ಚೌಧರಿ ಹೊಸ ಡಿಡಿ ನ್ಯೂಸ್ ಯಾಂಕರ್ ಆಗುವ ಮೂಲಕ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ವಾರದಲ್ಲಿ ಐದು ದಿನ ಎಂಬಂತೆ ವರ್ಷದಲ್ಲಿ 260 ದಿನಗಳ ಕಾಲ ಅವರು ಕಾರ್ಯಕ್ರಮ ನಡೆಸಲಿದ್ದಾರೆ.
ಇವರ ಕಾರ್ಯಕ್ರಮ ಒಂದು ಗಂಟೆ ಇರಲಿದೆ. ಒಂದು ವರ್ಷದ ವೇತನವಾಗಿ 15 ಕೋಟಿ ರೂಪಾಯಿಯನ್ನು ಇವರು ಪಡೆಯಲಿದ್ದಾರೆ. ಮೇ ತಿಂಗಳಿನಿಂದ ಇವರ ಕಾರ್ಯಕ್ರಮ ಪ್ರಸಾರವಾಗಲಿದೆ.
ಸುಧೀರ್ ಚೌದರಿಯ ಪ್ರವೇಶವಾಗುವುದರೊಂದಿಗೆ ಡಿಡಿ ಚಾನೆಲ್ ಅನ್ನು ಖಾಸಗಿ ಚಾನೆಲ್ ಆಗಿ ಪರಿವರ್ತಿಸುವ ಶ್ರಮಕ್ಕೆ ಆರಂಭ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷ ಏಪ್ರಿಲ್ ನಲ್ಲಿ ಡಿಡಿ ನ್ಯೂಸ್ ನ ಲೋಗೋದ ಬಣ್ಣವನ್ನುಕೆಂಪು ಬಣ್ಣದಿಂದ ಕೇಸರಿಯಾಗಿ ಪರಿವರ್ತಿಸಲಾಗಿತ್ತು. ನ್ಯೂಸ್ ಎಂದು ಹಿಂದಿಯಲ್ಲಿ ಇರುವ ಬರಹದ ಬಣ್ಣವನ್ನು ಕೂಡ ಕೇಸರಿ ಗೊಳಿಸಲಾಗಿತ್ತು . ಸದ್ಯ ಸುಧೀರ್ ಚೌದರಿ ಆಜ್ ತಕ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಬ್ಲಾಕ್ ಅಂಡ್ ವೈಟ್ ಎಂಬ ಕಾರ್ಯಕ್ರಮವನ್ನು ಅದರಲ್ಲಿ ನಡೆಸುತ್ತಿದ್ದಾರೆ.
2022 ರಲ್ಲಿ ಇವರು ಝಿ ನ್ಯೂಸ್ ಗೆ ರಾಜೀನಾಮೆ ನೀಡಿ ಆಜ್ ತಕ್ ಸೇರಿಕೊಂಡಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj