ಗಾಝಾದಲ್ಲಿ ಇಸ್ರೇಲ್ ದಾಳಿ ಮತ್ತಷ್ಟು ಜೋರು: ನಾಲ್ಕು ದಿನದಲ್ಲಿ 600 ಮಂದಿ ಫೆಲೆಸ್ತೀನಿಯರ ಹತ್ಯೆ

ಗಾಝಾದಲ್ಲಿ ಆಕ್ರಮಣವನ್ನು ಇಸ್ರೇಲ್ ಬಿಗಿಗೊಳಿಸಿದೆ.. ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ ಮಾರ್ಚ್ 18ರಂದು ಮತ್ತೆ ದಾಳಿ ಆರಂಭಿಸಿದ ಇಸ್ರೇಲ್ ನಾಲ್ಕು ದಿನಗಳೊಳಗೆ 600 ಮಂದಿ ಫೆಲೆಸ್ತೀನಿಯರ ಹತ್ಯೆ ನಡೆಸಿದೆ. ವಾಯು ದಾಳಿ ಮತ್ತು ಭೂ ದಾಳಿಯ ಮೂಲಕ ಭಾರಿ ನಾಶನಷ್ಟವನ್ನು ಇಸ್ರೇಲ್ ಮಾಡಿದೆ ಎಂದು ವರದಿಯಾಗಿದೆ.
ಪಶ್ಚಿಮ ಗಾಝಾದ ರಫಾ ದಿಂದ ಭೂ ದಾಳಿ ಆಕ್ರಮಣ ಆರಂಭಿಸಿರುವ ಇಸ್ರೇಲ್ ಮಧ್ಯ ಗಾಝಾದ ಸಮೀಪದಿಂದ ಮತ್ತು ಪೂರ್ವ ಭಾಗದಿಂದಲೂ ಆಕ್ರಮಣ ಪ್ರಾರಂಭಿಸಿರುವುದಾಗಿ ತಿಳಿದು ಬಂದಿದೆ.
ಈ ನಡುವೆ ಇಸ್ರೇಲ್ ಮೇಲೆ ಹಮಾಸ್ ರಾಕೆಟ್ ದಾಳಿ ನಡೆಸಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಗಾಝಾದ ಜೊತೆಗೆ ಪಶ್ಚಿಮ ದಂಡೆಯಲ್ಲಿಯೂ ಇಸ್ರೇಲ್ ದಾಳಿ ಮುಂದುವರಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj