ಪಣಂಬೂರು: ಸಿಎನ್ ಜಿ ಸಿಲಿಂಡರ್ ಸೋರಿಕೆ: ಕೆಲಕಾಲ ಆತಂಕದ ವಾತಾವರಣ
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರಿನ ನವಮಂಗಳೂರು ಬಂದರು ಪ್ರಾಧಿಕಾರ (NMPA) ಕಚೇರಿ ಬಳಿ ಸಿಎನ್ಜಿ ಸಿಲಿಂಡರ್ ಸೋರಿಕೆಯಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಬುಧವಾರ ಸಂಜೆ ನಡೆದಿದೆ.
ಗೇಲ್ ಇಂಡಿಯಾ ಗ್ಯಾಸ್ ಲಿಮಿಟೆಡ್ ಗೆ ಸೇರಿದ ವಾಹನವು ಬೈಕಂಪಾಡಿಯಿಂದ ಸಿಎನ್ ಜಿ ತುಂಬಿದ್ದ ಸಿಲಿಂಡರ್ ಗಳನ್ನು ಹೊತ್ತು ಸುಳ್ಯಕ್ಕೆ ತೆರಳುತ್ತಿತ್ತು. ಮಾರ್ಗಮಧ್ಯೆ ಸಿಲಿಂಡರ್ ವೊಂದರಲ್ಲಿ ಹಠಾತ್ ಗ್ಯಾಸ್ ಸೋರಿಕೆಯಾಗಿದ್ದು, ಭಾರೀ ಪ್ರಮಾಣದಲ್ಲಿ ಹೊಗೆ ಆವರಿಸಿಕೊಂಡಿದೆ. ಇದರಿಂದ ಸಾರ್ವಜನಿಕರಲ್ಲಿ ಭೀತಿ ಮೂಡಿತ್ತು.
ಈ ವೇಳೆ ಎಚ್ಚೆತ್ತ ಚಾಲಕ ಲಾರಿಯನ್ನು ತಕ್ಷಣವೇ ಹೆದ್ದಾರಿ ಪಕ್ಕಕ್ಕೆ ನಿಲ್ಲಿಸಿದರು. ಸಾರ್ವಜನಿಕರ ಮಾಹಿತಿಯ ಮೇರೆಗೆ NMPA ಹಾಗೂ NCF ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಗ್ಯಾಸ್ ಅನ್ನು ಸುರಕ್ಷಿತವಾಗಿ ಚದುರಿಸಿದರು.
ಗೇಲ್ ಗ್ಯಾಸ್ ಸ್ಟೇಷನ್ ನ ತಾಂತ್ರಿಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೃಹತ್ ಸಿಲಿಂಡರ್ ನ ಸೋರಿಕೆಯನ್ನು ಸಂಪೂರ್ಣವಾಗಿ ಸರಿಪಡಿಸಿದರು. ಈ ಅನಿರೀಕ್ಷಿತ ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























