ದುನಿಯಾ ವಿಜಯ್ ಜೈಲಿನಿಂದ ಬಿಡಿಸಿದ್ದ ಆರೋಪಿಯಿಂದ ಜೋಡಿ ಕೊಲೆ! - Mahanayaka

ದುನಿಯಾ ವಿಜಯ್ ಜೈಲಿನಿಂದ ಬಿಡಿಸಿದ್ದ ಆರೋಪಿಯಿಂದ ಜೋಡಿ ಕೊಲೆ!

suresha
11/11/2024

ಬೆಂಗಳೂರು:  ನಗರದ ಹೊರವಲಯದಲ್ಲಿ ನಡೆದಿದ್ದ ಜೋಡಿ ಕೊಲೆಗೆ ಟ್ವಿಸ್ಟ್ ಸಿಕ್ಕಿದ್ದು, ಬಾಗಲೂರು ಡಬಲ್ ಮರ್ಡರ್ ಆರೋಪಿಯನ್ನು ಈ ಹಿಂದೆ ನಟ ದುನಿಯಾ ವಿಜಯ್ ಶ್ಯೂರಿಟಿ ಹಣ ನೀಡಿ ಜೈಲಿನಿಂದ ಬಿಡುಗಡೆ ಮಾಡಿದ್ದರು. ಸಮಾಜದಲ್ಲಿ ಉತ್ತಮನಾಗಿ ಬಾಳುತ್ತಾನೆ ಎನ್ನುವ ಉದ್ದೇಶದಿಂದ ಹಣಕಟ್ಟಿ ದುನಿಯಾ ವಿಜಯ್ ಅಪರಾಧಿಯನ್ನ  ಜೈಲಿನಿಂದ ಬಿಡುಗಡೆ ಮಾಡಿದ್ದರು. ಆದರೆ ಅವರ ಆಶಯವನ್ನು ಸುರೇಶ ವ್ಯರ್ಥ ಮಾಡಿದ್ದಾನೆ.

ಈ ಹಿಂದೆ ಡಬಲ್ ಮರ್ಡರ್ ಕೇಸ್ ಹಾಗೂ ರೇಪ್‌ ಕೇಸಲ್ಲಿ ಸುರೇಶ ಜೈಲು ಸೇರಿದ್ದ. 10 ವರ್ಷ ಶಿಕ್ಷೆ ಅನುಭವಿಸಿದ್ದ ಸುರೇಶನಿಗೆ ಶ್ಯೂರಿಟಿ ಹಣ ನೀಡಲು ಯಾರೂ ಇರಲಿಲ್ಲ. ಹೀಗಾಗಿ ದುನಿಯಾ ವಿಜಯ್ ಅವರು  ತಲಾ ಮೂರು ಲಕ್ಷ ಹಣ ಕಟ್ಟಿ ಸುರೇಶ ಸೇರಿದಂತೆ ಮೂವರು ಅಪರಾಧಿಗಳನ್ನ ಜೈಲಿನಿಂದ ಬಿಡುಗಡೆ ಮಾಡಿ ಅವರಿಗೆ ಬದುಕುಕಟ್ಟಿಕೊಳ್ಳಲು ಒಂದು ಅವಕಾಶ ನೀಡಿದ್ದರು.

ಜೈಲಿನಿಂದ ಬಿಡುಗಡೆಯಾದ ಬಳಿಕ ಸುರೇಶ ಕೊತ್ತಂಬರಿ ಸೊಪ್ಪು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ. ತನ್ನ ಸಂಬಂಧಿಯಿಂದ ಶೆಡ್ ನಲ್ಲಿ ಕೆಲಸ ಪಡೆದುಕೊಂಡಿದ್ದ. ಗುಜರಿ ಮಾರಾಟ ಮಾಡುವ ವಿಚಾರಕ್ಕೆ ಗಲಾಟೆ ನಡೆಸಿದ್ದು, ಈ ವೇಳೆ ಕೊಲೆಯಾದ ನಾಗೇಶ್ ಮತ್ತು ಮಂಜುನಾಥ್, ನೀನು ಕಳ್ಳ ಕೊಲೆಗಾರ ಎಂದು ಸುರೇಶ್ ನನ್ನು ಅವಮಾನಿಸಿದ್ದಾರಂತೆ, ಇದರಿಂದ ರೊಚ್ಚಿಗೆದ್ದು ಇವರಿಬ್ಬರನ್ನೂ ಸುರೇಶ್ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಸುರೇಶ್ ಇದೀಗ ತನ್ನ ಮೂಲಸ್ಥಾನ ಜೈಲು ಸೇರಿದ್ದಾನೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ