ಓಲಾ ಕಂಪೆನಿಯ ಎಲೆಕ್ಟ್ರಿಕ್ ಬೈಕ್ ಖರೀದಿಸಿ ಬೇಸತ್ತ ಗ್ರಾಹಕ ಶೋರೂಂಗೆ ಬೆಂಕಿಯಿಟ್ಟ! - Mahanayaka

ಓಲಾ ಕಂಪೆನಿಯ ಎಲೆಕ್ಟ್ರಿಕ್ ಬೈಕ್ ಖರೀದಿಸಿ ಬೇಸತ್ತ ಗ್ರಾಹಕ ಶೋರೂಂಗೆ ಬೆಂಕಿಯಿಟ್ಟ!

ola
11/09/2024

ಕಲಬುರಗಿ: ಓಲಾ ಕಂಪೆನಿಯ ಎಲೆಕ್ಟ್ರಿಕ್ ಬೈಕ್ ಖರೀದಿಸಿದವರ ಗೋಲಾಟ ಯಾರೂ ಕೇಳುವಂತಿಲ್ಲ ಅನ್ನೋ ಪರಿಸ್ಥಿತಿ ಇದೆ. ಇದೀಗ ಓಲಾ ಕಂಪೆನಿ ನಿರ್ಲಕ್ಷ್ಯತನದಿಂದ ಬೇಸತ್ತ ಗ್ರಾಹಕ ಶೋ ರೂಂಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.

ಮಹಮ್ಮದ್ ನದೀಮ್ ಶೋರೂಂಗೆ ಬೆಂಕಿ ಹಚ್ಚಿದ ವ್ಯಕ್ತಿಯಾಗಿದ್ದಾನೆ. ಕೇವಲ 20 ದಿನಗಳ ಹಿಂದೆ ಈತ ಓಲಾ ಕಂಪೆನಿಯ ಸ್ಕೂಟರ್ ಖರೀದಿಸಿದ್ದ. ಆದರೆ, ಬೈಕ್ ಪದೇ ಪದೇ ರಿಪೇರಿಗೆ ಬರುತ್ತಿತ್ತು. ಸಾಕಷ್ಟು ಬಾರಿ ಶೋರೂಂಗೆ ತೆರಳಿದರೂ ಸಿಬ್ಬಂದಿ ನಿರ್ಲಕ್ಷ್ಯವಹಿಸಿದ್ದಾರೆ. ಇದರಿಂದ ಬೇಸತ್ತು ನಿನ್ನೆ ಶೋರೂಂಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ಕಲಬುರಗಿಯ ಹುಮನಾಬಾದ್ ರಸ್ತೆಯಲ್ಲಿ ಎಲೆಕ್ಟ್ರಿಕ್ ಬೈಕ್ ಶೋರೂಂ ನಿನ್ನೆ ಬೆಂಕಿ ಹತ್ತಿಕೊಂಡು ಉರಿದಿತ್ತು. ಎಲ್ಲರೂ ಇದು ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿದ ಘಟನೆ ಎಂದು ತಿಳಿದು ಕೊಂಡಿದ್ದರು. ಆದರೆ ಪೊಲೀಸರು ತನಿಖೆ ನಡೆಸಿದ ವೇಳೆ ಬೆಂಕಿ ಹಚ್ಚಿರುವುದು ಎಂದು ತಿಳಿದು ಬಂದಿದೆ.

ಶೋರೂಂನಲ್ಲಿ ವಾಗ್ವಾದ ನಡೆಸಿದ ಬಳಿಕ ಪೆಟ್ರೋಲ್ ತಂದು ನದೀಮ್ ಶೋರೂಮ್ ಗೆ ಬೆಂಕಿ ಹಚ್ಚಿದ್ದಾನೆ. ಪರಿಣಾಮವಾಗಿ 6 ಹೊಸ ಎಲೆಕ್ಟ್ರಿಕ್ ಬೈಕ್​ಗಳು ಸುಟ್ಟು ಭಸ್ಮವಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ.

ಕಲಬುರಗಿಯ ಚೌಕ್ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಸದ್ಯ ನದೀಮ್ ನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ