ಚಲಿಸುತ್ತಿದ್ದ ಆ್ಯಂಬುಲೆನ್ಸ್ ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ - Mahanayaka

ಚಲಿಸುತ್ತಿದ್ದ ಆ್ಯಂಬುಲೆನ್ಸ್ ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಸಬ್ ಇನ್ಸ್‌ಪೆಕ್ಟರ್

13/02/2021

ನವದೆಹಲಿ: ಮೂರು ಆಸ್ಪತ್ರೆಗಳಲ್ಲಿ ತನ್ನನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದರಿಂದ ಆಕ್ರೋಶಗೊಂಡ ದೆಹಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿರುವ 39 ವರ್ಷದ ಎಸ್ ಐ ರಾಜ್  ವೀರ್ ಸಿಂಗ್ CATS ಆ್ಯಂಬುಲೆನ್ಸ್ ನಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೆಹಲಿಯ ಗುರು ತೇಜ್ ಬಹದ್ದೂರ್ ಆಸ್ಪತ್ರೆ ಬಳಿ ಶುಕ್ರವಾರ ನಡೆದಿದೆ.

ಆಗ್ನೇಯ ಜಿಲ್ಲೆಯ ಡಿಸ್ಟ್ರಿಕ್ಟ್‌ ಲೈನ್ಸ್‌ಗಳಲ್ಲಿ ಕೆಲಸ ಮಾಡುತ್ತಿರುವ ಎಸ್‌ಐ ರಾಜ್‌ವೀರ್ ಸಿಂಗ್, ದ್ವಾರಕಾದ ತಮ್ಮ ಮನೆಯಿಂದ ಕ್ಯಾಟ್ಸ್ ಆಂಬ್ಯುಲೆನ್ಸ್‌ಗೆ ಶುಕ್ರವಾರ ಕರೆ ಮಾಡಿದ್ದಾರೆ. ಮೊದಲು ಇಲ್ಲಿನ ಡಿಡಿಯು ಆಸ್ಪತ್ರೆಗೆ ತಲುಪಿದ್ದು, ಅಲ್ಲಿ ಸುಮ್ಮನೆ ಕಾರಣ ಹೇಳಿ ದಾಖಲಿಸಿಕೊಳ್ಳಲು ನಿರಾಕರಿದ್ದರು.  ಎರಡನೇ ಆಂಬ್ಯುಲೆನ್ಸ್ ಐಎಚ್‌ ಬಿಎಎಸ್ ಆಸ್ಪತ್ರೆಗೆ ತಲುಪಿತು, ಅಲ್ಲಿ ರಾಜ್‌ವೀರ್‌ಗೆ ಮತ್ತೆ ಪ್ರವೇಶ ನಿರಾಕರಿಸಲಾಯಿತು. ಅದರ ನಂತರ ಅದೇ ಆಂಬ್ಯುಲೆನ್ಸ್ ರಾಜ್ವೀರ್ ಅವರೊಂದಿಗೆ ಜಿಟಿಬಿ ಆಸ್ಪತ್ರೆಗೆ ತಲುಪಿತು. ಇಲ್ಲಿಯೂ ಅವರನ್ನು ಪ್ರವೇಶಿಸಲು ನಿರಾಕರಿಸಲಾಯಿತು. ಇದರಿಂದ ರಾಜ್ ವೀರ್ ತೀವ್ರವಾಗಿ ಆಕ್ರೋಶಗೊಂಡಿದ್ದರು. ಅವರನ್ನು CATS ಕಾರ್ಮಿಕರು ಅವನನ್ನು ಸಮಾಧಾನಪಡಿಸಿದ್ದರು. ಐಬಿಎಎಎಸ್ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರು ಈ ನಡುವೆ ಸಿಂಗ್ ತಮ್ಮ ಬಟ್ಟೆಯಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು” ಎಂದು ತಿಳಿದು ಬಂದಿದೆ.

ಈ ಸಂಬಂಧ ಪೊಲೀಸರು ವೈದ್ಯರು ಹಾಗೂ CATS ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದಾರೆ. ನಮಗೆ ಘಟನೆಯ ಬಗ್ಗೆ ಖಚಿತವಿಲ್ಲ, ಆ್ಯಂಬುಲೆನ್ಸ್ ಒಳಗೆ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಷ್ಟೇ ನಮಗೆ ತಿಳಿದಿದೆ. ಈ ವೇಳೆ 2-3 ಕಾರ್ಮಿಕರು ಜೊತೆಗೆ ಇದ್ದರು ಎಂದು ಕ್ಯಾಟ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ