ದರ್ಶನ್ ಭೇಟಿಗಾಗಿ ಜೈಲಿನ ಮುಂಭಾಗ ಮಹಿಳಾ ಅಭಿಮಾನಿಯಿಂದ ರಂಪಾಟ!

ಬಳ್ಳಾರಿ: ನಟ ದರ್ಶನ್ ಅವರನ್ನು ಭೇಟಿಯಾಗಲು ಮಹಿಳಾ ಅಭಿಮಾನಿಯೊಬ್ಬರು ಬಳ್ಳಾರಿ ಜೈಲಿಗೆ ಆಗಮಿಸಿದ ಘಟನೆ ನಡೆದಿದ್ದು, ಪೊಲೀಸರು ಭೇಟಿಗೆ ಅವಕಾಶ ನೀಡದಿದ್ದ ಹಿನ್ನೆಲೆ ಮಹಿಳೆ ಸ್ಥಳದಲ್ಲಿ ರಂಪಾಟ ನಡೆಸಿದರು.
ಲಕ್ಷ್ಮೀ ಎಂಬ ಮಹಿಳಾ ಫ್ಯಾನ್ ದರ್ಶನ್ ಅವರನ್ನ ಭೇಟಿಯಾಗಲು ಬಂದಿದ್ದರು. ದರ್ಶನ್ ಅವರೆಂದರೆ ನನಗೆ ಇಷ್ಟ, ಅವರನ್ನು ನೋಡಲು ಯಾಕೆ ಬಿಡುತ್ತಿಲ್ಲ? ನಾನು ಪರಪ್ಪನ ಅಗ್ರಹಾರ ಜೈಲ್ ಗೆ ಕೂಡ ಹೋಗಿದ್ದೆ. ಅಲ್ಲಿಯೂ ನನ್ನನ್ನು ನೋಡಲು ಬಿಟ್ಟಿರಲಿಲ್ಲ. ಈಗ ಇಲ್ಲಿಯೂ ಯಾಕೆ ಬಿಡುತ್ತಿಲ್ಲ ಎಂದು ಮಾಧ್ಯಮದ ಮುಂದೆ ಮಹಿಳೆ ಆಕ್ರೋಶ ಹೊರ ಹಾಕಿದರು.
ದರ್ಶನ್ ಅವರಿಗೆ ಪ್ಲಾಸ್ಟಿಕ್ ಕವರ್ ನಲ್ಲಿ ಹಣ್ಣು ತಂದಿದ್ದ ಮಹಿಳೆ, ಅವರ ಜೊತೆಗೆ ಮಾತನಾಡಲು ಬಿಡದಿದ್ದರೂ ಪರವಾಗಿಲ್ಲ, ಈ ಹಣ್ಣು ಕೊಟ್ಟು ನಾನು ಹೊರಡುತ್ತೇನೆ ಎಂದು ಹೇಳಿದ್ದಾರೆ. ಕೈಯಲ್ಲಿ ಆಧಾರ್ ಕಾರ್ಡ್ ಹಿಡಿದುಕೊಂಡು ಬಂದಿದ್ದ ಮಹಿಳೆ, ಈ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆಧಾರ್ ಕಾರ್ಡ್ ತಂದ್ರೆ ನೋಡಲು ಬಿಡುವುದಾಗಿ ಪೊಲೀಸರು ಹೇಳಿದ್ದರು. ಹಾಗಾಗಿ ಆಧಾರ್ ಕಾರ್ಡ್ ತಂದಿರುವುದಾಗಿ ಅವರು ಹೇಳಿದ್ದಾರೆ.
ನಿಮ್ಮನ್ನ ಯಾರು ಕಳುಹಿಸಿರೋದು ಅಂತ ಮಾಧ್ಯಮ ಸಿಬ್ಬಂದಿ ಪ್ರಶ್ನಿಸಿದಾಗ, ಯಾರೂ ಕಳಿಸಿಲ್ಲ, ನಾನೇ ಬಂದಿದ್ದೇನೆ. ಪರಪ್ಪನ ಅಗ್ರಹಾರ ಜೈಲಿಗೆ ಹೋದಾಗಲೂ ನನ್ನನ್ನು ಬಿಟ್ಟಿರಲಿಲ್ಲ. ಇಲ್ಲಿಗೆ ಬಂದಾಗಲೂ ಬಿಡುತ್ತಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಕುಡಿತಾರೆ, ಸಿಗರೇಟ್ ಸೇದುತ್ತಾರೆ ಅಂತ ಪರಪ್ಪನ ಅಗ್ರಹಾರ ಜೈಲಿನಿಂದ ಯಾಕೆ ಇಲ್ಲಿಗೆ ಶಿಫ್ಟ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮಹಿಳೆ, ಇದೆಲ್ಲ ದೊಡ್ಡ ತಪ್ಪಾ ಎಂದು ಪ್ರಶ್ನಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj