ಮಹಿಳೆಯರು ಸುರಕ್ಷಿತವಾಗಿ ಕೆಲಸ ಮಾಡುವಂತೆ ಆಗಬೇಕು: ಶೃತಿ ಹರಿಹರನ್ - Mahanayaka
2:04 AM Thursday 14 - November 2024

ಮಹಿಳೆಯರು ಸುರಕ್ಷಿತವಾಗಿ ಕೆಲಸ ಮಾಡುವಂತೆ ಆಗಬೇಕು: ಶೃತಿ ಹರಿಹರನ್

shruti hariharan
05/09/2024

ಕೇರಳದ ಹೇಮಾ ಕಮಿಟಿ ಹಾಗೇ ನಮ್ಮ ಕನ್ನಡ ಚಿತ್ರರಂಗಕ್ಕೂ ಒಂದು ಕಮಿಟಿ ಬೇಕು. ಮಹಿಳೆಯರು ಸುರಕ್ಷಿತವಾಗಿ ಕೆಲಸ ಮಾಡುವಂತೆ ಆಗಬೇಕು ಎಂದು ಸಿಎಂಗೆ ಮನವಿ ಮಾಡಿರೋದಾಗಿ ಶೃತಿ ಹರಿಹರನ್ ತಿಳಿಸಿದ್ದಾರೆ.

‘ಫೈರ್ ಸಂಸ್ಥೆ’ ವತಿಯಿಂದ ಇಂದು ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ಅವರು ಹೇಳಿಕೆ ನೀಡಿದರು.

ಈ ಮನವಿ ಬಗ್ಗೆ ಇನ್ನಷ್ಟು ಚರ್ಚೆಯಾಗಬೇಕು. ಮತ್ತೊಮ್ಮೆ ಸದ್ಯದಲ್ಲೇ ಸಭೆ ಮಾಡೋಣ  ಎಂದು ಭೇಟಿ ವೇಳೆ ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ ಎಂದು ಶೃತಿ ಹರಿಹರನ್ ಹೇಳಿದರು.

ಫೈರ್ ನಿಯೋಗದ ಮೂಲಕ ಗಂಡಾಗಲಿ ಅಥವಾ ಮಹಿಳೆಯರಾಗಲಿ ಯಾರೇ ಆಗಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಇದು ಒಂದೇ ಅಲ್ಲ, ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳ ಮೀರಿ ಹಲವು ಸಮಸ್ಯೆಗಳಿವೆ. ಇದರ ಕಡಿವಾಣಕ್ಕೆ ಸರ್ಕಾರದ ಬೆಂಬಲ ಕೂಡ ಇರುತ್ತದೆ ಎಂದು ಅವರು ಹೇಳಿದರು.




ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ ಕೆಲ ಸೌಲಭ್ಯಗಳನ್ನು ಕೊಡಬೇಕಾಗುತ್ತದೆ. ಕೆಲಸದ ಸ್ಥಳದಲ್ಲಿ ವಾಶ್‌ರೂಮ್, ವಾಹನದ ವ್ಯವಸ್ಥೆ ಬೇಕಾಗುತ್ತದೆ ಇದು ಕೇವಲ ನಾಯಕಿಯರಿಗೆ ಅಷ್ಟೇ ಅಲ್ಲ. ಜ್ಯೂನಿಯರ್ ಆರ್ಟಿಸ್ಟ್, ಡ್ಯಾನ್ಸರ್‌ಗೆ ಹೀಗೆ ಕೆಲಸ ಮಾಡುವವರಿಗೆ ಸಮಾನತೆ ಇರಬೇಕು ಅಂತ ಶೃತಿ ತಿಳಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ