ಹುಡುಗಿಗಾಗಿ ಬುರ್ಖಾ ಧರಿಸಿ ಚಿಕ್ಕಮಗಳೂರಿಗೆ ಬಂದ ಯುವಕ: ಸಾರ್ವಜನಿಕರಿಂದ ಗೂಸ!
ಚಿಕ್ಕಮಗಳೂರು: ಹುಡುಗಿಗಾಗಿ ಯುವಕನೊಬ್ಬ ಬುರ್ಖಾ ಧರಿಸಿ ಚಿಕ್ಕಮಗಳೂರಿಗೆ ಬಂದು ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದ ಘಟನೆ ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆಯಲ್ಲಿ ನಡೆದಿದೆ.
ಬೆರಳಿಗೆ ನೈಲ್ ಪಾಲಿಶ್ ಹಾಕಿ ಶೃಂಗಾರ ಮಾಡಿಕೊಂಡಿದ್ದ ಪ್ರೇಮಿ, ಬುರ್ಖಾ ತೊಟ್ಟು ಚಿಕ್ಕಮಗಳೂರು ನಗರದಲ್ಲಿ ಓಡಾಡಿದ್ದಾನೆ. ಆದರೆ ಆತನ ಕೈ ಬೆರಳಿ ಹಾಗೂ ಕಾಲು ನೋಡಿ ಅನುಮಾನಗೊಂಡು ಸ್ಥಳೀಯರು ವಿಚಾರಿಸಿದ್ದಾರೆ.
ಬುರ್ಖಾದೊಳಗಿರುವುದು ಹುಡುಗಿ ಅಲ್ಲ ಹುಡುಗ ಎನ್ನುವುದು ತಿಳಿಯುತ್ತಿದ್ದಂತೆಯೇ ಸಾರ್ವಜನಿಕರು ಆ ಯುವಕನಿಗೆ ಗೂಸ ನೀಡಿದ್ದು, ಯಾಕೆ ಬುರ್ಖಾ ಧರಿಸಿ ಓಡಾಡುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ.
ಬಾಳೆಹೊನ್ನೂರು ಮೂಲದ ಯುವಕ ಬುರ್ಖಾ ಧರಿಸಿ ಬಂದ ಯುವಕ ಎಂದು ಹೇಳಲಾಗಿದೆ. ತೇಟ್ ಯುವತಿಯಂತೆ ಬುರ್ಖಾ ಧರಿಸಿ ನಿಂತಿದ್ದವನನ್ನು ಕಂಡು ಅನುಮಾನಗೊಂಡ ಸ್ಥಳೀಯರು ವಿಚಾರಿಸಿದ್ದು, ಹುಡುಗ ಅನ್ನೋದು ತಿಳಿಯುತ್ತಿದ್ದಂತಯೇ ನಾಲ್ಕೇಟು ನೀಡಿದ್ದಾರೆ.
ಬುರ್ಖಾ ಒಳಗೆ ಯುವಕ ಚಾಕು ಕೂಡ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇದನ್ನು ಗಮನಿಸಿ ಅನುಮಾನದಿಂದ ಸ್ಥಳೀಯರು ವಿಚಾರಿಸಿದ್ದರು. ವಿಚಾರಿಸಿದ ವೇಳೆ ಹುಡುಗಿಯನ್ನು ನೋಡಲು ಬುರ್ಖಾ ಧರಿಸಿ ಬಂದಿರುವುದಾಗಿ ಆತ ಹೇಳಿದ್ದಾನೆ.
ಹುಡುಗಿಗಾಗಿ ಬಾಳೆಹೊನ್ನೂರಿನಲ್ಲಿ ಈತ ಬುರ್ಖಾ ಖರೀದಿಸಿದ್ದನಂತೆ, ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ಚಿಕ್ಕಮಗಳೂರು ಬಸವನಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: