ಆಧಾರ್ ಕಾರ್ಡ್ ಬಳಕೆದಾರರಿಗೆ ಸಿಹಿಸುದ್ದಿ | ಇನ್ನು ಮುಂದೆ ನಿಮಗೆ ಆ ಕಷ್ಟ ಇಲ್ಲ! - Mahanayaka
2:45 PM Saturday 25 - January 2025

ಆಧಾರ್ ಕಾರ್ಡ್ ಬಳಕೆದಾರರಿಗೆ ಸಿಹಿಸುದ್ದಿ | ಇನ್ನು ಮುಂದೆ ನಿಮಗೆ ಆ ಕಷ್ಟ ಇಲ್ಲ!

26/10/2020

ನವದೆಹಲಿ: ಆಧಾರ್ ಕಾರ್ಡ್ ಈಗ ಭಾರತೀಯ ನಾಗರಿಕನ ಎಲ್ಲ, ಕೆಲಸಗಳಿಗೂ ಕಡ್ಡಾಯವಾಗಿ ಕೇಳುತ್ತಾರೆ. ಹೀಗಾಗಿ ಆಧಾರ್ ಕಾರ್ಡ್ ಅನಿವಾರ್ಯ ಎಂದೇ ಎಲ್ಲರೂ ಹೇಳುತ್ತಾರೆ. ಆದರೆ ಬಾಡಿಗೆ ಮನೆಗಳಲ್ಲಿ ವಾಸಿಸುವವರಿಗೆ ಆಗಾಗ ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾವಣೆ ತಲೆನೋವಾಗಿ ಪರಿಣಮಿಸಿತ್ತು. ಆದರೆ ಈಗ ನಿಮ್ಮ ಆಧಾರ್ ಕಾರ್ಡ್ ನ ವಿಳಾಸವನ್ನು ನೀವೇ ಬದಲು ಮಾಡಿಕೊಳ್ಳಬಹುದಾಗಿದೆ.

ಬಾಡಿಗೆದಾರರ ವಿಳಾಸವನ್ನು ಬದಲಿಸಲು ನಿಮ್ಮಲ್ಲಿ ಬಾಡಿಗೆ ಮನೆಯ ಅಗ್ರಿಮೆಂಟ್ ಇದ್ದರೆ ಸಾಕು. ಈ ಅಗ್ರಿಮೆಂಟ್ ನ್ನು ಬಳಸಿಕೊಂಡು ನೀವು ಬಾಡಿಗೆ ಮನೆಯ ವಿಳಾಸವನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

mahanayaka

ಆಧಾರ್ ನ ಅಧಿಕೃತ ವೆಬ್ ಸೈಟ್ https://uidai.gov.in ಭೇಟಿ ನೀಡಿ, ಅಲ್ಲಿ ವಿಳಾಸ ನವೀಕರಣದ ಮೇಲೆ ಕ್ಲಿಕ್ ಮಾಡಬೇಕು. ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ ಲಾಗಿನ್ ಮಾಡಬೇಕು. ಬಳಿಕ ಓಟಿಪಿ ಮೊಬೈಲ್ ಗೆ ಬರುತ್ತದೆ. ಅದನ್ನು ನಮೂದಿಸಿ ವಿಳಾಸವನ್ನು ಬದಲಾವಣೆ ಮಾಡಬಹುದಾಗಿದೆ.

ಇನ್ನೂ ಕಚೇರಿಯ ಮೂಲಕವೂ ನಿಮ್ಮ ವಿಳಾಸ ಬದಲಾವಣೆ ಮಾಡಬಹುದಾಗಿದೆ. ಆಧಾರ್ ಕೇಂದ್ರದಿಂದ ಆಧಾರ್ ನವೀಕರಣ ಅಥವಾ ತಿದ್ದುಪಡಿ ಫಾರಂ ಪಡೆದು ಅಗತ್ಯವಿರುವ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ ಅದರಲ್ಲಿ ವಿಳಾಸ ನವೀಕರಣ ನಮೂದಿಸಬೇಕು. ಆಧಾರ್ ಕಾರ್ಡ್ ಜೆರಾಕ್ಸ್ ಕಾಪಿ ಜೊತೆಗೆ ಪಾನ್ ಕಾರ್ಡ್, ಬಾಡಿಗೆ ಪತ್ರ, ವೋಟರ್ ಐಡಿ ಅಥವಾ ಪಾಸ್ಪೋರ್ಟ್ ನೀಡಿ ವಿಳಾಸ ಬದಲಿಸಿಕೊಳ್ಳಬಹುದು.

ಮಹಾನಾಯಕ ಮಾಧ್ಯಮದ ಇನ್ನಷ್ಟು ಸುದ್ದಿಗಳಿಗಾಗಿ ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 6363101317 ನಂಬರ್ ಸೇರಿಸಿಕೊಳ್ಳಿ

ಮಹಾನಾಯಕ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ

https://t.me/joinchat/Q8oMxBZkakVUy7-VpEsIXQ

ಇತ್ತೀಚಿನ ಸುದ್ದಿ