ಹಬ್ಬದ ಸಂಭ್ರಮಚಾರಣೆಯಲ್ಲಿ ಕೋವಿಡ್ ನಿಯಮಗಳನ್ನು ತಪ್ಪದೆ ಪಾಲಿಸಿ | ತುರ್ತು ಸಂದರ್ಭದಲ್ಲಿ 112 ಕ್ಕೆ ಕರೆ ಮಾಡಿ | ಪಿಎಸ್ ಐ ಮೇಟಿ - Mahanayaka

ಹಬ್ಬದ ಸಂಭ್ರಮಚಾರಣೆಯಲ್ಲಿ ಕೋವಿಡ್ ನಿಯಮಗಳನ್ನು ತಪ್ಪದೆ ಪಾಲಿಸಿ | ತುರ್ತು ಸಂದರ್ಭದಲ್ಲಿ 112 ಕ್ಕೆ ಕರೆ ಮಾಡಿ | ಪಿಎಸ್ ಐ ಮೇಟಿ

25/10/2020

ಚನ್ನಗಿರಿ; ಇನ್ನು ಮುಂದೆ ನಿಮ್ಮೆಲ್ಲಾ ತುರ್ತು ಸೇವೆಗಳಿಗೆ 112 ಸಂಖ್ಯೆಗೆ ಕ್ಕೆ ಕರೆಮಾಡಿ . ದೇಶದ್ಯಾಂತ ಒಂದೇ ಸಂಖ್ಯೆಯಾಗಿದ್ದು  ಸಾರ್ವಜನಿಕರ  ತುರ್ತು ಸೇವೆಗಾಗಿ ದಿನದ 24 ಗಂಟೆಗಳೂ ಸಹ ನಿರಂತರವಾಗಿ 112 ಅಧಿಕಾರಿಗಳು ಸೇವೆಯಲ್ಲಿರುತ್ತಾರೆ. ಇದರ ಉಪಯೋಗವನ್ನು ಸಾರ್ವಜನಿಕರು ಉಚಿತವಾಗಿ ಈ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಸಂತೇಬೆನ್ನೂರು ಪಿಎಸ್ ಐ ಜನಸ್ನೇಹಿ ಶಿವರುದ್ರಪ್ಪ ಮೇಟಿ ಹೇಳಿದರು.


Provided by

ಈದ್ ಮಿಲಾದ್ ಹಬ್ಬದ ಅಂಗವಾಗಿ ಠಾಣೆಯ ಆವರಣದಲ್ಲಿ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ಸೇವೆ . ಅಗ್ನಿದುರಂತ, ಪೋಲೀಸ್ ಸಹಾಯಗಳಿಗೆ 112 ಕ್ಕೆ ಕರೆ ಮಾಡಿದರೆ ಸರಿಯಾದ ಸೂಕ್ತ ಸಮಯಕ್ಕೆ ನಿಮ್ಮ ಸೇವೆಗೆ ಸ್ಪಂದನ ವಾಹನವು ನಿಮ್ಮನ್ನು ತಲುಪುತ್ತದೆ. ಈ ಸೇವೆಯನ್ನು ಸ್ಮಾರ್ಟ್ ಪೋನಿನ ಮೂಲಕವು ಪಡೆಯಬಹುದಾಗಿದ್ದು ನಿಮ್ಮ ಪೋನಿನಲ್ಲಿ  ‘112 ಇಂಡಿಯಾ ಅಪ್ಲೀಕೇಶನ್ ‘ ಡೌನ್ ಲೌಡ್ ಮಾಡಿಕೊಂಡು ಈ ಸೇವೆಯನ್ನು ಬಳಸಬಹುದಾಗಿದೆ  ಎಂದು ತಿಳಿಸಿದರು.

ತೀವ್ರ ಪರಿಸ್ಥಿತಿಯಲ್ಲಿ (ಎಸ್ ಒ ಎಸ್ ) ಸಿಗ್ನಲ್ ನ್ನು ಪ್ರಚೋದನೆ ಮಾಡಿ ತುರ್ತು ಸ್ಪಂದನಾ ಕೇಂದ್ರ . ಸಂಬಂದಿಗಳಿಗೆ ಹಾಗೂ ಸ್ವಯಂ ಸೇವಕರಿಗಳಿಗೆ ತ್ವರಿತವಾಗಿ ಕಾರ್ಯನ್ಮೂಖವಾಗುವಂತೆ ಎಚ್ಚರಿಸಲು ಎಸ್ಒಎಸ್ ಸಹಾಯ ಮಾಡುತ್ತದೆ ಹಾಗೂ ಈ ಆಪ್ಲಿಕೇಶನಿಂದ ಸ್ಥಳ , ವಿವರಗಳನ್ನು ಪ್ರದರ್ಶಿಸುವುದಲ್ಲದೆ ಸ್ವಯಂ ಸೇವಕರ ಪೋನಿನಲ್ಲಿ ಅಲಾರಂ ಮೂಲಕ ಗಮನವನ್ನು ಸಹ ಸಳೆಯುತ್ತದೆ ಎಂದರು .

ಗ್ರಾಮಾಂತರ ಪ್ರದೇಶಗಲ್ಲಿ ದ್ವಿಚಕ್ರ ವಾಹನ ಸವಾರರು ತಲೆಗೆ ಹೆಲ್ಮೆಟ್ ನ್ನು ಕಡ್ಡಾಯ ಗೊಳಿಸಲಾಗುವುದು . ನಿಮ್ಮ ಪ್ರಾಣ ರಕ್ಷಣೆಗಾಗಿ ಎಲ್ಲಾ ವಾಹನ ಸವಾರರು ಹೆಲ್ಮೆಟ್ ಧರಿಸಬೇಕು . ದಂಡ ಕಟ್ಟುವ ಬದಲು ತಮ್ಮ ಅಮೂಲ್ಯವಾದ ಜೀವವನ್ನು ರಕ್ಷಿಸಿಕೊಳ್ಳಿ . ಪೋಲೀಸ್ ಇಲಾಖೆಯೊಂದಿಗೆ ಸಹಕರಿಸಿ ಇವಾಗ ದಸರ ಹಾಗೂ ಈದ್ ಮಿಲಾದ್  ಹಬ್ಬಗಳಿರುವುದರಿಮದ ಕೋವಿಡ್-19 ನಿಯಮಗಳನ್ನು ಎಲ್ಲಾರು ಕಡ್ಡಾಯವಾಗಿ ಪಾಲಿಸಬೇಕೆಂದರು ಈ ಸಂದರ್ಭದಲ್ಲಿ ಬಿಜೆಪಿ ಪಾರ್ಟಿಯ ಹಿಂದುಳಿದ ವರ್ಗದ ಅದ್ಯಕ್ಷರಾದ ಕೆ ಬಸವರಾಜ್ . ಜಿಲ್ಲಾ ವಕ್ಫ ಕಮಿಟಿ ಉಪಾಧ್ಯಕ್ಷರು ಹಾಗೂ ವರ್ತಕರು ,ಪತ್ರಕರ್ತರಾದ ಕೆ ಸಿರಾಜ್ ಅಹಮದ್ , ರಿಜ್ವಿ ಹುಂಡೈ ಕಾರು ಷೋರೂಮ್ ಮಾಲಿಕರು  ಹಾಗೂ ಇನ್ನಿತರರು ಉಪಸ್ಥಿರಿದ್ದರು .

ವರದಿ: ಕೋಗಲೂರು ಕುಮಾರ್

ಇತ್ತೀಚಿನ ಸುದ್ದಿ