ಡ್ರಗ್ಸ್ ಖರೀದಿಸುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಖ್ಯಾತ ಟಿವಿ ನಟಿ - Mahanayaka
10:22 AM Thursday 7 - December 2023

ಡ್ರಗ್ಸ್ ಖರೀದಿಸುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಖ್ಯಾತ ಟಿವಿ ನಟಿ

25/10/2020

ಮುಂಬೈ: ಡ್ರಗ್ಸ್ ಖರೀದಿಸುತ್ತಿದ್ದ ವೇಳೆ ಖ್ಯಾತ ಟಿವಿ ನಟಿಯೊಬ್ಬರನ್ನು  ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ ಸಿಬಿ) ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದು,  ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

ನಟ ಸುಶಾಂತ್ ಸಾವಿನ ಬೆನ್ನಲ್ಲೇ ಡ್ರಗ್ಸ್ ವಿರುದ್ಧ ಬೇಟೆ ಆರಂಭಿಸಿದ್ದ ಎನ್ ಸಿಬಿ, ಡ್ರಗ್ಸ್ ಮಾರಾಟ ಮಾಡುವವರು ಹಾಗೂ ಖರೀದಿರುವವರ ಮೇಲೆ ನಿಗಾ ಇರಿಸಿತ್ತು. ಹಿಂದಿ ಸೀರಿಯಲ್ ನಟಿ ಇದೀಗ ಎನ್ ಸಿಬಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

preetika chauhan

ಸವ್ಧಾನ್ ಇಂಡಿಯಾ ಮತ್ತು ದೇವೋ ಕೆ ದೇವ್ ಮಹಾದೇವ್ ಧಾರಾವಾಹಿಗಳಲ್ಲಿ ನಟಿಸಿದ್ದ ಪ್ರಖ್ಯಾತ ಟಿವಿ ನಟಿ ಪ್ರಿತಿಕಾ ಚೌಹಾನ್ ಅವರು ಡ್ರಗ್ಸ್ ಖರೀದಿಸುತ್ತಿದ್ದ ವೇಳೆ ಪೊಲೀಸರ ಅವರನ್ನು ಬಂಧಿಸಿದ್ದಾರೆ.

ಬಂಧನದ ಬಳಿಕ ಅವರನ್ನು  ಕಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಸುಶಾಂತ್ ರಜಪೂತ್ ಸಾವಿನ ಬಳಿಕ ಎನ್ ಸಿ ಬಿ ಅಧಿಕಾರಿಗಳು ಡ್ರಗ್ಸ್  ಮಾಫಿಯಾದ ವಿರುದ್ಧ ತನಿಖೆ ಚುರುಕುಗೊಳಿಸಿದ್ದಾರೆ. ಸರಬರಾಜುದಾರರು, ಪಾದಚಾರಿಗಳು, ಗ್ರಾಹಕರು ಸೇರಿದಂತೆ ಬಂಧಿತರಿಂದ ಸಂಗ್ರಹವಾದ ಮಾಹಿತಿಗಳನ್ನು ಆಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಮಹಾನಾಯಕ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ

https://t.me/joinchat/Q8oMxBZkakVUy7-VpEsIXQ

ಇತ್ತೀಚಿನ ಸುದ್ದಿ