ಬಿಜೆಪಿ ಕಾರ್ಯಕರ್ತನ ಮೇಲೆ ಗುಂಡಿನ ದಾಳಿ | ಗಾಯಗೊಂಡ ಕಾರ್ಯಕರ್ತನ ಸ್ಥಿತಿ ಚಿಂತಾಜನಕ - Mahanayaka

ಬಿಜೆಪಿ ಕಾರ್ಯಕರ್ತನ ಮೇಲೆ ಗುಂಡಿನ ದಾಳಿ | ಗಾಯಗೊಂಡ ಕಾರ್ಯಕರ್ತನ ಸ್ಥಿತಿ ಚಿಂತಾಜನಕ

25/10/2020

ಹೌರಾ:  ಬಿಜೆಪಿ ಕಾರ್ಯಕರ್ತನ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡ ಘಟನೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ನಡೆದಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.

ಟಿಎಂಸಿ ಕಾರ್ಯಕರ್ತನೊಬ್ಬ ಈ ದಾಳಿ ನಡೆಸಿದ್ದಾನೆ ಎಂದು ಹೇಳಲಾಗಿದೆ. ಈ ಘಟನೆಯನ್ನು ರಾಜಕೀಯ ಹಿಂಸಾಚಾರ ಎಂದು ಬಿಜೆಪಿ ಕರೆದ ಬಿಜೆಪಿ ಕಾರ್ಯಕರ್ತರು ಟಿಎಂಸಿ ಕಾರ್ಯಕರ್ತನ ಮನೆ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿದ್ದಾರೆ.

ಈ ಸಂಬಂಧ ಮಾಹಿತಿ ನೀಡಿರುವ ಪೊಲೀಸರು, ಇದು ರಾಜಕೀಯ ದಾಳಿ ಎನ್ನುವುದನ್ನು ತಳ್ಳಿ ಹಾಕಿದ್ದಾರೆ.  ಈ ಇಬ್ಬರೂ ನೆರೆ ಹೊರೆಯವರಾಗಿದ್ದಾರೆ. ಭೂ ವಿವಾದವೇ ಈ ದಾಳಿಗೆ ಕಾರಣ ಎಂದು ತಿಳಿಸಿದ್ದಾರೆ.


Provided by

ಬಾಗ್ನಾನ್ ಪೊಲೀಸ್ ಠಾಣೆ ಪ್ರದೇಶದ ಚಂದನಪರದಲ್ಲಿ ಈ ಘಟನೆ ನಡೆದಿದ್ದು, 52 ವರ್ಷದ ಹೂವಿನ ವ್ಯಾಪಾರಿ ಕಿಂಕರ್ ಮಾಝಿ ಶನಿವಾರ ರಾತ್ರಿ ಮನೆಗೆ ಮರಳುತ್ತಿದ್ದಾಗ, ಅವರನ್ನು ತಡೆದ ಟಿಎಂಸಿ ಕಾರ್ಯಕರ್ತ ಹಾಗೂ ಇತರೆ ವ್ಯಕ್ತಿಗಳು ತುಂಬಾ ಹತ್ತಿರದಿಂದಲೇ ಗುಂಡು ಹಾರಿಸಿದ್ದಾರೆ.

ಮಹಾನಾಯಕ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ

https://t.me/joinchat/Q8oMxBZkakVUy7-VpEsIXQ

ಇತ್ತೀಚಿನ ಸುದ್ದಿ