ಕಾರು ಬೈಕ್ ಅಪಘಾತ : ಹಿಂದೂ ಸಂಘಟನೆ ಕಾರ್ಯಕರ್ತ ಮೃತ್ಯು - Mahanayaka

ಕಾರು ಬೈಕ್ ಅಪಘಾತ : ಹಿಂದೂ ಸಂಘಟನೆ ಕಾರ್ಯಕರ್ತ ಮೃತ್ಯು

23/11/2020

ಬಂಟ್ವಾಳ: ಬೈಕ್ ಹಾಗೂ ಕಾರು ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಮಾಣಿ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ನಡೆದಿದೆ.

ಕಲ್ಲಡ್ಕ ಕಡೆಯಿಂದ ಬರುತ್ತಿದ್ದ ಕಾರು ಮಾಣಿ ಕಡೆಯಿಂದ ಬರುತ್ತಿದ್ದ ಬೈಕ್ ಗೆ ಢಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಮೃತ ಪಟ್ಟ ಯುವಕನನ್ನು ಕಲ್ಲಡ್ಕದ ಯತಿರಾಜ್ ಎಂದು ಗುರುತಿಸಲಾಗಿದೆ.ಯತಿರಾಜ್ ಅವರು ಕಲ್ಲಡ್ಕದ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು.

ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ಕಾರು ಯತಿರಾಜ್ ಅವರ ದ್ವಿಚಕ್ರವಾಹನಕ್ಕೆ ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದರು. ಗಂಭೀರಗೊಂಡಿದ್ದ ಯತಿರಾಜ್ ಮಂಗಳೂರಿನ ಖಾಸಗಿ‌ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಮೇಲ್ಕಾರ್ ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ