ನಟ ದರ್ಶನ್ ಅಭಿಮಾನಿ ಸಾವಿಗೆ ಶರಣು? - Mahanayaka

ನಟ ದರ್ಶನ್ ಅಭಿಮಾನಿ ಸಾವಿಗೆ ಶರಣು?

darshan
17/06/2024

ನಟ ದರ್ಶನ್ ಅಭಿಮಾನಿ ಎನ್ನಲಾದ ಯುವಕನೋರ್ವ ಮೋರಿಗೆ ಬಿದ್ದು ಮೃತಪಟ್ಟಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಾಳೆ ದೊಡ್ಡಿಯಲ್ಲಿ ನಡೆದಿದ್ದು,  ಆತ್ಮಹತ್ಯೆಗೆ ಶರಣಾಗಿರುವ ಅನುಮಾನ ಸೃಷ್ಟಿಯಾಗಿದೆ.


Provided by

ಭೈರೇಶ್ ಹೆಸರಿನ ದರ್ಶನ್ ಅಭಿಮಾನಿ ಮೋರಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.

ವರದಿಗಳ ಪ್ರಕಾರ,  2–3 ದಿನಗಳಿಂದ ಭೈರೇಶ್ ಅನ್ನ ನೀರು ಬಿಟ್ಟಿದ್ದರು. ಕೊಲೆ ಕೇಸ್ ನಲ್ಲಿ ಸಿಲುಕಿ ದರ್ಶನ್ ಅವರ ಪರಿಸ್ಥಿತಿ ನೆನೆದು ಸಾಕಷ್ಟು ನೋವಿನಲ್ಲಿದ್ದರು ಎಂದು ಹೇಳಲಾಗಿದೆ.

ಸರಿಯಾದ ಆಹಾರ ಸೇವಿಸದ ಹಿನ್ನೆಲೆ ನಿತ್ರಾಣಗೊಂಡು ಮೋರಿಗೆ ಬಿದ್ದು ಮೃತಪಟ್ಟಿರಬಹುದು ಅಥವಾ ಸಾವಿಗೆ ಶರಣಾದರೇ ಅನ್ನುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

ಪವಿತ್ರಾ ಗೌಡಗೆ ಅಶ್ಲೀಲ ಫೋಟೋ, ಸಂದೇಶ ಕಳುಹಿಸಿ ಕಿರುಕುಳ ನೀಡಿದ್ದ ಚಿತ್ರದುರ್ಗದ ರೇಣುಕಾಸ್ವಾಮಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ 19 ಮಂದಿ ಅರೆಸ್ಟ್ ಆಗಿದ್ದಾರೆ.  ಈ ಪ್ರಕರಣ ಇದೀಗ ಭಾರೀ ಚರ್ಚೆಯಲ್ಲಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ