ನಟ ದರ್ಶನ್ ಅವರನ್ನು ಹಳೆಯ ಸೂಪರ್ ಸ್ಟಾರ್ ಆಗಿ ನೋಡಬೇಕು: ರಮೇಶ್ ಅರವಿಂದ್ - Mahanayaka
11:25 PM Thursday 12 - December 2024

ನಟ ದರ್ಶನ್ ಅವರನ್ನು ಹಳೆಯ ಸೂಪರ್ ಸ್ಟಾರ್ ಆಗಿ ನೋಡಬೇಕು: ರಮೇಶ್ ಅರವಿಂದ್

ramesh aravind
10/09/2024

ಬೆಂಗಳೂರು: ನಟ ದರ್ಶನ್ ಅವರನ್ನು ಹಳೆಯ ಸೂಪರ್ ಸ್ಟಾರ್ ಆಗಿ ನೋಡಬೇಕು ಅನ್ನೋದು ನಮ್ಮ ಆಸೆ ಅಂತ ನಟ ರಮೇಶ್ ಅರವಿಂದ್ ಹೇಳಿದ್ದಾರೆ.

ದರ್ಶನ್ ಕೇಸ್ ಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ನನ್ನ ಕಣ್ಣಿಗೆ  ಮೂವರು ದರ್ಶನ್ ಕಾಣಿಸುತ್ತಿದ್ದಾರೆ. ಬಹಳ ಮಜಾ ಕೊಟ್ಟ ಅವರ ಸಿನಿಮಾಗಳು, ವೀಕೆಂಡ್ ವಿತ್ ರಮೇಶ್ ವೇದಿಕೆ ಮೇಲೆ ಕುಳಿತಿದ್ದ ದರ್ಶನ್, ಇವತ್ತಿನ ದರ್ಶನ್ ಎಂದು ಅವರು ಹೇಳಿದರು.

ಈ ಘಟನೆಯಿಂದ ನಮ್ಮೆಲ್ಲರಿಗೂ ಬೇಸರ ಆಗಿದೆ. ಇದರಿಂದ ದೊಡ್ಡ ತಪ್ಪಾಗಿದೆ. ಈ ತಪ್ಪನ್ನು ಯಾರು ಮಾಡಿದ್ದಾರೋ ಅವರಿಗೆ ಶಿಕ್ಷೆ ನೀಡುವ ಕೆಲಸ ಕಾನೂನು ಮಾಡುತ್ತದೆ ಎಂದು ಅವರು ಹೇಳಿದರು.

ದರ್ಶನ್ ಈ ಸಮಸ್ಯೆಯಿಂದ ಶಿಕ್ಷೆ ಅನುಭವಿಸಿ ಹೊರಬಂದಾಗ ಅವರು ಏನ್ಮಾಡ್ತಾರೆ ಎಂಬುದು ತುಂಬಾ ಇಂಟರೆಸ್ಟಿಂಗ್ ಆಗಿದೆ ಎಂದು ಅವರು ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ