ನಟನ ಮೇಲೆ ನಿರ್ದೇಶಕನಿಂದ ಲೈಂಗಿಕ ದೌರ್ಜನ್ಯ: ಆಡಿಷನ್ ಗೆ ಕರೆದು ದುಷ್ಕೃತ್ಯ - Mahanayaka

ನಟನ ಮೇಲೆ ನಿರ್ದೇಶಕನಿಂದ ಲೈಂಗಿಕ ದೌರ್ಜನ್ಯ: ಆಡಿಷನ್ ಗೆ ಕರೆದು ದುಷ್ಕೃತ್ಯ

ranjan
30/08/2024

ತಿರುವನಂತಪುರ: ನ್ಯಾ.ಹೇಮಾ ವರದಿಯಿಂದಾಗಿ ಬಳಿಕ ಮಲಯಾಳಂ ಚಿತ್ರರಂಗ ಅಲ್ಲೋಲ ಕಲ್ಲೋಲ ಆಗಿದೆ. ಈ ನಡುವೆ ನಟಿಯರು ತಮ್ಮ ವಿರುದ್ಧ ನಡೆದ ದೌರ್ಜನ್ಯಗಳನ್ನು ಬಹಿರಂಗಪಡಿಸುತ್ತಿದ್ದಾರೆ. ಈ ನಡುವೆ ಒಬ್ಬ ನಟನ ಮೇಲೆ ಕೂಡ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನುವುದು ಬಯಲಾಗಿದೆ.

ನಿರ್ಮಾಪಕ ಹಾಗೂ ನಿರ್ದೇಶಕ ರಂಜಿತ್ ವಿರುದ್ಧ ಇದೀಗ ಯುವ ನಟನೊಬ್ಬ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು, ಡಿಜಿಪಿಗೆ ಈ ಬಗ್ಗೆ ದೂರು ನೀಡಿದ್ದಾರೆ.

2012ರಲ್ಲಿ ಸಿನಿಮಾವೊಂದರ ಆಡಿಷನ್ ನೆಪದಲ್ಲಿ ಹೊಟೇಲ್ ಗೆ ಕರೆದು ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ರಂಜಿತ್ ವಿರುದ್ಧ ನೊಂದ ಯುವಕ ಆರೋಪಿಸಿದ್ದಾರೆ.
ಆಡಿಷನ್ ಗೆ ತೆರಳಿದ್ದ ವೇಳೆ ಪಾತ್ರವೊಂದು ನೀಡುವುದಾಗಿ ಹೇಳಿದ ಅವರು, ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿದ್ದರು. ನಾನು ಅವರು ಆಡಿಷನ್ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂದು ಭಾವಿಸಿದ್ದೆ. ಆದ್ರೆ ಘಟನೆಯ ಮರುದಿನ ನನಗೆ ಹಣವನ್ನು ನೀಡಿದರು ಎಂದು ಯುವನಟ ಆರೋಪಿಸಿದ್ದಾರೆ.

ಈ ದೂರನ್ನು ವಿಶೇಷ ತನಿಖಾ ತಂಡ (SIT) ಪರಿಶೀಲಿಸಿ ಕೈಗೊಳ್ಳಲಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ. ಒಟ್ಟಿನಲ್ಲಿ ಕೇರಳ ಚಿತ್ರರಂಗದಲ್ಲಿ ದಿನಕ್ಕೊಂದು ಲೈಂಗಿಕ ದೌರ್ಜನ್ಯದ ಪ್ರಕರಣಗಳು ಬೆಳಕಿಗೆ ಬರುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

 

ಇತ್ತೀಚಿನ ಸುದ್ದಿ