ಅಮೆರಿಕದಿಂದ ಬೆಂಗಳೂರಿಗೆ ಆಗಮಿಸಿದ ನಟ ಶಿವರಾಜ್ ಕುಮಾರ್ - Mahanayaka
8:49 AM Thursday 13 - February 2025

ಅಮೆರಿಕದಿಂದ ಬೆಂಗಳೂರಿಗೆ ಆಗಮಿಸಿದ ನಟ ಶಿವರಾಜ್ ಕುಮಾರ್

shivaraj kumar
26/01/2025

ಬೆಂಗಳೂರು: ಒಂದು ತಿಂಗಳ ವಿಶ್ರಾಂತಿ ಬಳಿಕ ಸಂಪೂರ್ಣ ಚಿತ್ರೀಕರಣದಲ್ಲಿ ಭಾಗಿಯಾಗುವುದಾಗಿ ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ.

ಅಮೆರಿಕದಲ್ಲಿ ಶಸ್ತ್ರ ಚಿಕಿತ್ಸೆಯ ಬಳಿಕ ಬೆಂಗಳೂರಿಗೆ ಇಂದು ಆಗಮಿಸಿದ ಅವರು, ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೋಗಬೇಕಾದರೆ ಬಹಳ ಎಮೋಷನ್ ಇತ್ತು, ಏನೇ ಆದ್ರೂ ಫೇಸ್ ಮಾಡಬೇಕಿತ್ತು. ಧೈರ್ಯವಾಗಿ ಹೋಗಬೇಕಿತ್ತು, ಹೋಗಿ ಬಂದೆ, ಹೋಗಬೇಕಿದ್ದರೆ ಸ್ವಲ್ಪ ಭಯ ಇತ್ತು, ಅಭಿಮಾನಿಗಳ ಆಶೀರ್ವಾದದಿಂದ ಹೋಗಿ ಬಂದೆ ಎಂದರು.

ಏರ್ಪೋರ್ಟ್ ಇಳಿದು ಆಸ್ಪತ್ರೆ ಮುಂದೆ ಹೋಗಬೇಕಿದ್ದಾಗಲೇ ಧೈರ್ಯ ಬಂತು, ಆಪರೇಷನ್ ಮುಗಿದ ಮೇಲೆ ಬಂದು ಹೇಳಿದ ಮೇಲೆ ಎಲ್ಲವೂ ಆಗಿದೆ ಅಂತ ಗೊತ್ತಾಯ್ತು ಎಂದು ಅವರು ತಿಳಿಸಿದರು.

6 ಗಂಟೆಗಳ ಕಾಲ ಸರ್ಜರಿ ನಡೆಯಿತು. ಎರಡನೇ ದಿನದಿಂದಲೇ ವಾಕ್ ಶುರು ಮಾಡಿದ್ದೆ. ಆ ಎನರ್ಜಿ ಎಲ್ಲಿಂದ ಬಂತೋ ಗೊತ್ತಿಲ್ಲ, ಅಭಿಮಾನಿಗಳಷ್ಟೇ ಅಲ್ಲ, ಇಂಡಸ್ಟ್ರಿ ಅವರು ಧೈರ್ಯ ತುಂಬಿದರು ಎಂದರಲ್ಲದೇ, ಗೀತಾನ ಬಗ್ಗೆ ಮಾತನಾಡಲ್ಲ, ಗೀತಾ ಹೆಂಡತಿನೂ ಹೌದು ತಾಯಿನೂ ಹೌದು. ಈ ಬಾರಿ ಮಗಳು ನಿವೇದಿತಾ ತಾಯಿಗಿಂತ ಹೆಚ್ಚು ನೋಡಿಕೊಂಡಿದ್ದಾಳೆ ಎಂದರಲ್ಲದೇ ನಿವೇದಿತಾ ಗೆಳತಿ ಅನು ಒಂದು ತಿಂಗಳು ನಮ್ಮ ಜೊತೆಗೆ ಇದ್ದರು ಎಂದು ತಿಳಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

ಇತ್ತೀಚಿನ ಸುದ್ದಿ