ನಟ ವಿಜಯ್ ಅವರ ‘ತಮಿಳಗ ವೇಟ್ರಿ ಕಳಗಂ’ ಪಕ್ಷದ ಚಿಹ್ನೆ ಬಿಡುಗಡೆ
ತಮಿಳು ನಟ ವಿಜಯ್ ತಮ್ಮ ತಮಿಳಗ ವೇಟ್ರಿ ಕಳಗಂ ಪಕ್ಷದ ಚಿಹ್ನೆಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದ್ದಾರೆ. ಇಂದು ತಮ್ಮ ಪಕ್ಷದ ಕಚೇರಿಯಲ್ಲಿ ಕಡುಗೆಂಪು ಮತ್ತು ಹಳದಿ ಬಣ್ಣದ ಧ್ವಜವು ಎರಡು ಆನೆಗಳ ನಡುವೆ ವಾಗ್ಟೈಲ್ ಹೊಂದಿರುವ ಚಿಹ್ನೆಯನ್ನು ಬಿಡುಗಡೆಗೊಳಿಸಿದರು.
ಪಣಯೂರಿನ ಪಕ್ಷದ ಕಚೇರಿಯಲ್ಲಿ ಪಕ್ಷದ ನೂತನ ಚಿಹ್ನೆ ಇರುವ ಧ್ವಜವನ್ನು ಧ್ವಜರೋಹಣ ನಡೆಸಿದರು. ಈ ಮೂಲಕ ತಮಿಳುನಾಡು ರಾಜಕೀಯ ರಂಗಕ್ಕೆ ವಿಜಯ್ ಅಧಿಕೃತವಾಗಿ ಎಂಟ್ರಿ ನೀಡಿದ್ದಾರೆ. 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ವಿಜಯ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಧ್ವಜಾರೋಹಣದ ಬಳಿಕ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಇಲ್ಲಿಯವರೆಗೆ ನಾವೇ ದುಡಿದಿದ್ದೇವೆ, ಈಗ ತಮಿಳುನಾಡಿಗಾಗಿ ಕೆಲಸ ಮಾಡುತ್ತೇವೆ. ಥಾವೇಕ ಧ್ವಜವು ತಮಿಳುನಾಡಿನ ಭವಿಷ್ಯದ ಪೀಳಿಗೆಗೆ ಯಶಸ್ಸಿನ ಧ್ವಜವಾಗಿದೆ. ಇದನ್ನು ಪಕ್ಷದ ಬಾವುಟವಾಗಿ ಮಾತ್ರ ನೋಡದೆ, ತಮಿಳುನಾಡಿನಲ್ಲಿ ವಿಜಯ ಪತಾಕೆಯಾಗಿ ನೋಡುತ್ತೇವೆ ಎಂದರು.
ನೀವೆಲ್ಲರೂ ನಮ್ಮ ಮೊದಲ ರಾಜ್ಯ ಸಮ್ಮೇಳನಕ್ಕಾಗಿ ಕಾಯುತ್ತಿದ್ದೀರಿ ಎಂದು ನನಗೆ ತಿಳಿದಿದೆ. ಅದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ ಮತ್ತು ಶೀಘ್ರದಲ್ಲೇ ನಾನು ಅದನ್ನು ಘೋಷಿಸುತ್ತೇನೆ. ಅದಕ್ಕೂ ಮೊದಲು ನಾನು ಇಂದು ನಮ್ಮ ಪಕ್ಷದ ಧ್ವಜವನ್ನು ಅನಾವರಣ ಮಾಡಿದ್ದೇನೆ, ನನಗೆ ತುಂಬಾ ಹೆಮ್ಮೆ ಅನಿಸುತ್ತದೆ. ತಮಿಳುನಾಡಿನ ಅಭಿವೃದ್ಧಿಗೆ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.
ಇನ್ನೂ ಕಾರ್ಯಕ್ರಮಕ್ಕೂ ಮುನ್ನ ‘ಸರ್ವ ಜೀವಿಗಳಿಗೂ ಸಮಾನತೆ ಎಂಬ ತತ್ವಕ್ಕೆ ಬದ್ಧರಾಗಿ, ಜಾತಿ, ಧರ್ಮ, ಲಿಂಗಭೇದ ತೊಲಗಿ ಎಲ್ಲರಿಗೂ ಸಮಾನ ಹಕ್ಕು, ಅವಕಾಶ ಕಲ್ಪಿಸಲು ಶ್ರಮಿಸುತ್ತೇವೆ’ ಎಂಬ ಪ್ರತಿಜ್ಞೆಯನ್ನು ವಿಜಯ್ ಸ್ವೀಕರಿಸಿದರು. ಪಕ್ಷದ ಧ್ವಜಗೀತೆಯನ್ನು ಇದೇ ವೇಳೆ ಹಾಡಲಾಯಿತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth