ಶ್ರದ್ಧಾಳ ಕೊಲೆಗೆ ದೊಡ್ಡ ಪ್ಲಾನ್ ಮಾಡಿದ್ದ ಅಫ್ತಾಬ್ ಪೊಲೀಸರ ಕೈಗೆ ಸಿಕ್ಕಿ ಬಿದ್ದದ್ದು ಸಣ್ಣ ತಪ್ಪಿನಿಂದ! - Mahanayaka
8:26 PM Wednesday 11 - December 2024

ಶ್ರದ್ಧಾಳ ಕೊಲೆಗೆ ದೊಡ್ಡ ಪ್ಲಾನ್ ಮಾಡಿದ್ದ ಅಫ್ತಾಬ್ ಪೊಲೀಸರ ಕೈಗೆ ಸಿಕ್ಕಿ ಬಿದ್ದದ್ದು ಸಣ್ಣ ತಪ್ಪಿನಿಂದ!

shradha
17/11/2022

ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಆರೋಪಿ ಅಫ್ತಾಭ್ ಶ್ರದ್ಧಾಳನ್ನು ಇಷ್ಟೆಲ್ಲ ಪ್ಲಾನ್ ಮಾಡಿ ಹತ್ಯೆ ಮಾಡಿದ್ರೂ, ಆತನ ಮೇಲೆ ಪೊಲೀಸರಿಗೆ ಅನುಮಾನ ಶುರುವಾಗಲು ಆತನ ಆ ಒಂದು ತಪ್ಪು ಕಾರಣವಾಗಿತ್ತಂತೆ.

ಹೌದು…! ಶ್ರದ್ಧಾಳನ್ನು ಹತ್ಯೆ ಮಾಡಿದ ಬಳಿಕ ಅಫ್ತಾಭ್ ಆಕೆಯ ಮೊಬೈಲ್, ಸೋಷಿಯಲ್ ಮೀಡಿಯಾವನ್ನು ತಾನೇ ಬಳಸಿಕೊಂಡು, ಶ್ರದ್ಧಾ ಜೀವಂತವಾಗಿದ್ದಾಳೆ ಅನ್ನೋದನ್ನು ನಂಬಿಸಲು ಹೊರಟಿದ್ದ. ಈ ಆಟ ಇನ್ನು ಹೆಚ್ಚು ದಿನ ನಡೆಯುವುದಿಲ್ಲ ಅನ್ನೋದು ಅರಿವಾಗ್ತಿದಂತೆಯೇ ಮೇ 26 ರಂದು ಶ್ರದ್ಧಾಳ ಫೋನ್ ನ್ನು ಸ್ವಿಚ್ ಆಫ್ ಮಾಡಿದ್ದಾನೆ.

ಶ್ರದ್ಧಾಳ ಫೋನ್ ಸ್ವಿಚ್ ಆಫ್ ಮಾಡುವುದಕ್ಕೂ ಮೊದಲು ಅಂದ್ರೆ ಮೇ 22ರಿಂದ ಮೇ 26ರ ನಡುವೆ ಶ್ರದ್ಧಾಳ ಬ್ಯಾಂಕ್ ಅಕೌಂಟ್ ನಿಂದ 54 ಸಾವಿರ ರೂಪಾಯಿಯನ್ನು ತನ್ನ ಅಕೌಂಟ್ ಗೆ ವರ್ಗಾವಣೆ ಮಾಡಿಕೊಂಡಿದ್ದ. ಅಲ್ಲದೇ ಶ್ರದ್ಧಾಳ ಫೋನ್ ನಿಂದ ದೆಹಲಿಯ ಛತ್ತರ್ಪುರದಿಂದ ಆನ್ಲೈನ್ ವಹಿವಾಟು ನಡೆಸಿದ್ದ.

ಕೊಲೆಯ ನಂತರ, ಶ್ರದ್ಧಾ ಜೊತೆಗೆ ತಾನು ಬ್ರೇಕಪ್ ಮಾಡಿಕೊಂಡಿದ್ದೇನೆ ಅಂತ ತೋರಿಸಲು ಅವನು ಅವಳ ಫೋನ್ನಿಂದ ಹಣವನ್ನು ಕಳುಹಿಸುತ್ತಿದ್ದ ಮತ್ತು ಕೆಲವೊಮ್ಮೆ ಅವಳ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದ. ಆದರೆ, ಅಫ್ತಾಬ್ ಈ ಪ್ರಕರಣದಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಎಷ್ಟು ಪ್ರಯತ್ನ ಮಾಡಿದರೂ, ಪೊಲೀಸರ ಕಣ್ಣಿನಿಂದ ಆತ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಶ್ರದ್ಧಾಳ ಅಕೌಂಟ್ ನಿಂದ ಅಫ್ತಾಬ್ ಅಕೌಂಟ್ ಗೆ ಹಣ ವರ್ಗಾವಣೆಯಾಗಿರುವ ವರದಿ ಸಿಕ್ತಿದಂತೆಯೇ ಅಫ್ತಾಬ್ ನ ಮೇಲೆ ಪೊಲೀಸರಿಗೆ ಇದ್ದ ಅನುಮಾನ ಬಲವಾಗಿತ್ತು. ತಕ್ಷಣವೇ ಮಾಣಿಕ್ ಪುರ ಪೊಲೀಸರು ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಇದೀಗ ಅಫ್ತಾಬ್ ನ ಕ್ರೌರ್ಯ ಒಂದೊಂದೇ ತೆರೆದುಕೊಳ್ಳುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ