‘ಬೋಲ್ತಾ ಹಿಂದೂಸ್ತಾನ್’ ಸುದ್ದಿ ಚಾನೆಲ್ ಪ್ರಸಾರಕ್ಕೆ ನಿರ್ಬಂಧ: ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ..? - Mahanayaka

‘ಬೋಲ್ತಾ ಹಿಂದೂಸ್ತಾನ್’ ಸುದ್ದಿ ಚಾನೆಲ್ ಪ್ರಸಾರಕ್ಕೆ ನಿರ್ಬಂಧ: ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ..?

09/04/2024

ಇತ್ತೀಚೆಗಷ್ಟೇ ಸುಮಾರು 3 ಲಕ್ಷ ಚಂದಾದಾರರನ್ನು ಹೊಂದಿದ್ದ ‘ಬೋಲ್ತಾ ಹಿಂದೂಸ್ತಾನ್’ ಸುದ್ದಿ ಚಾನೆಲನ್ನು ಸರ್ಕಾರದ ನಿರ್ದೇಶನದಂತೆ ನಿರ್ಬಂಧಿಸಲಾಗಿತ್ತು. ಇದೀಗ ಈ ಎರಡೂ ಹಿಂದಿ ಚಾನೆಲ್‌ಗಳನ್ನು ನಿರ್ಬಂಧಿಸಲು ಸೂಚನೆ ನೀಡಲಾಗಿದೆ. ಸದ್ಯ, ಇನ್ನೂ ಚಾನೆಲ್‌ಗಳನ್ನು ನಿರ್ಬಂಧಿಸಲಾಗಿಲ್ಲ.


Provided by

ಇತ್ತೀಚೆಗಷ್ಟೇ, ಸುಮಾರು 3 ಲಕ್ಷ ಚಂದಾದಾರರನ್ನು ಹೊಂದಿದ್ದ ‘ಬೋಲ್ತಾ ಹಿಂದೂಸ್ತಾನ್’ ಸುದ್ದಿ ಚಾನೆಲ್‌ಅನ್ನು ಸರ್ಕಾರದ ನಿರ್ದೇಶನದಂತೆ ನಿರ್ಬಂಧಿಸಲಾಗಿತ್ತು. ಇದೀಗ, ಈ ಎರಡೂ ಹಿಂದಿ ಚಾನೆಲ್‌ಗಳನ್ನು ನಿರ್ಬಂಧಿಸಲು ಸೂಚನೆ ನೀಡಲಾಗಿದೆ.

ಯೂಟ್ಯೂಬ್‌ ನೀಡಿರುವ ನೋಟಿಸ್‌ಅನ್ನು ಚಾನೆಲ್‌ ತನ್ನ ‘ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡಿದೆ. “ಸರ್ಕಾರವು ‘ನ್ಯಾಷನಲ್ ದಸ್ತಕ್’ ಅನ್ನು ಮುಚ್ಚಲು ಬಯಸಿದೆ. ಯೂಟ್ಯೂಬ್ ಏಪ್ರಿಲ್ 3ರಂದು ನೋಟಿಸ್ ಕಳುಹಿಸಿದೆ. ದೇಶದಲ್ಲಿ ಚುನಾವಣಾ ‘ಮಾದರಿ ನೀತಿ ಸಂಹಿತೆ’ ಜಾರಿಯಲ್ಲಿರುವಾಗ ಇಂತಹ ಕ್ರಮಗಳು ನಡೆಯುತ್ತಿವೆ” ಎಂದು ಹೇಳಿದೆ.


Provided by

“ಲಕ್ಷಗಟ್ಟಲೆ ಪತ್ರಿಕೆಗಳು ಮತ್ತು ಟಿವಿ ಸುದ್ದಿ ವಾಹಿನಿಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಬಹುಜನರ ನ್ಯಾಷನಲ್‌ ದಸ್ತಕ್ ಬಗ್ಗೆ ಸರ್ಕಾರಕ್ಕೆ ತುಂಬಾ ಭಯವಿದೆಯೇ?” ಎಂದು ಚಾಲನೆ ಹೇಳಿದೆ.
ಪತ್ರಕರ್ತ ನವೀನ್ ಕುಮಾರ್ ನಡೆಸುತ್ತಿರುವ ಡಿಜಿಟಲ್ ಸುದ್ದಿ ಮಾಧ್ಯಮ ‘ಆರ್ಟಿಕಲ್ 19 ಇಂಡಿಯಾ’ ಸಹ ಇದೇ ರೀತಿಯ ನೋಟಿಸ್‌ಅನ್ನು ಪಡೆದಿದೆ. ಈ ಚಾನಲ್ 28 ಲಕ್ಷ ಚಂದಾದಾರರನ್ನು ಹೊಂದಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ