ಫಲಿತಾಂಶ ಬೆನ್ನಲ್ಲೇ ಮ್ಯಾಜಿಕ್ ನಂಬರ್ ಗಾಗಿ ಸರ್ಕಸ್ ಆರಂಭ: ಸರ್ಕಾರ ರಚಿಸುವವರು ಯಾರು? - Mahanayaka

ಫಲಿತಾಂಶ ಬೆನ್ನಲ್ಲೇ ಮ್ಯಾಜಿಕ್ ನಂಬರ್ ಗಾಗಿ ಸರ್ಕಸ್ ಆರಂಭ: ಸರ್ಕಾರ ರಚಿಸುವವರು ಯಾರು?

electin
04/06/2024

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆಲ್ಲುವ ಬಿಜೆಪಿಯ ಕನಸು ಭಗ್ನವಾಗಿದೆ. ಎನ್ ಡಿಎ ಮೈತ್ರಿ ಕೂಟ 297 ಸ್ಥಾನಗಳನ್ನು ಪಡೆದು ಮುನ್ನಡೆ ಸಾಧಿಸಿದ್ದರೂ, ಬಿಜೆಪಿ ಸ್ವಂತ ಬಲದಿಂದ ಬಹುಮತ ಪಡೆಯುವಲ್ಲಿ ವಿಫಲವಾಗಿದೆ.


Provided by

ಹೀಗಾಗಿ ಸರ್ಕಾರ ರಚನೆಯಲ್ಲಿ ಇದರ ಲಾಭವನ್ನು ಇಂಡಿಯಾ ಒಕ್ಕೂಟ ಪಡೆದುಕೊಳ್ಳಲಿದೆಯೇ ಎನ್ನುವ ಅನುಮಾನಗಳು ಕೂಡ ಸೃಷ್ಟಿಯಾಗಿದೆ.
ಇಂಡಿಯಾ ಮೈತ್ರಿ ಕೂಟ ಚುನಾವಣಾ ಸಮೀಕ್ಷೆಗಳ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ.

ಅಲ್ಲದೇ ನಿರೀಕ್ಷೆಗೂ ಮೀರಿದ ಫಲಿತಾಂಶ ನೀಡಿದ್ದು, 229 ಸ್ಥಾನಗಳನ್ನು ಪಡೆದುಕೊಂಡಿದೆ. ಇದೀಗ ಮ್ಯಾಜಿಕ್ ನಂಬರ್ ಗಾಗಿ ಇಂಡಿಯಾ ಒಕ್ಕೂಟ ಎನ್ ಡಿಎ ಮೈತ್ರಿ ಕೂಟಕ್ಕೆ ಗಾಳ ಹಾಕಲು ಸಜ್ಜಾಗಿದೆ.

I.N.D.I.A ಒಕ್ಕೂಟ ಸಭೆ ಕರೆದಿದ್ದು, ಜೊತೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಆಂಧ್ರಪ್ರದೇಶಕ್ಕೆ ವಿಶೇಷ ಆಫರ್ ಘೋಷಣೆ ಮಾಡಿದೆ. ಚುನಾವಣಾ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಸರ್ಕಾರ ರಚನೆಯ ಸರ್ಕಸ್ ಆರಂಭಗೊಂಡಿದೆ.

ಬಿಜೆಪಿ ನೇತೃತ್ವದ ಎರಡು ಎನ್ ಡಿಎ ಒಕ್ಕೂಟದ ಎರಡು ಮುಖ್ಯ ಪಕ್ಷಗಳಾದ ಟಿಡಿಪಿ ಮತ್ತು ಜೆಡಿಯು ಪಕ್ಷವನ್ನು ಇಂಡಿಯಾ ಒಕ್ಕೂಟ ತನ್ನ ತೆಕ್ಕೆಗೆ ಸೆಳೆಯಲು ವಿಶೇಷ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಇದೀಗ ಇಂಡಿಯಾ ಒಕ್ಕೂಟ ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗೆ ಉಪಪ್ರಧಾನಿ ಹುದ್ದೆಯ ಆಫರ್ ಮತ್ತು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದೆ.

ಇನ್ನೊಂದೆಡೆ ಬಿಜೆಪಿ ಕೂಡ ಈಗಾಗಲೇ ಟಿಡಿಪಿ ಮತ್ತು ಜೆಡಿಯು ಎರಡೂ ಪಕ್ಷದ ಜೊತೆಗೆ ಮಾತುಕತೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಕೂಡ ಎನ್‌ಡಿಎ ಪ್ರಮುಖ ಪಾಲುದಾರ ಪಕ್ಷಗಳಾದ ಟಿಡಿಪಿ ಚಂದ್ರಬಾಬು ನಾಯ್ಡು ಅವರನ್ನು ಸಂಪರ್ಕಿಸಿ ಆಫರ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ