ಮಧ್ಯಪ್ರದೇಶದಲ್ಲಿ ಲಕ್ಷಕ್ಕಿಂತಲೂ ಹೆಚ್ಚು ನೋಟಾ ಮತದಾನ: ಇದು ಇತಿಹಾಸದಲ್ಲೇ ಹೆಚ್ಚು - Mahanayaka

ಮಧ್ಯಪ್ರದೇಶದಲ್ಲಿ ಲಕ್ಷಕ್ಕಿಂತಲೂ ಹೆಚ್ಚು ನೋಟಾ ಮತದಾನ: ಇದು ಇತಿಹಾಸದಲ್ಲೇ ಹೆಚ್ಚು

04/06/2024

ಮಧ್ಯಪ್ರದೇಶದ ಇಂದೋರ್‌ ಲೋಕಸಭಾ ಕ್ಷೇತ್ರದಲ್ಲಿ 1.7 ಲಕ್ಷ ಜನರು ನೋಟಾ ಆಯ್ಕೆಯನ್ನು ಒತ್ತಿದ್ದಾರೆ. ಇದರೊಂದಿಗೆ ಚುನಾವಣಾ ಇತಿಹಾಸದಲ್ಲೇ ಕ್ಷೇತ್ರವೊಂದರಲ್ಲಿ ಅತಿಹೆಚ್ಚು ನೋಟಾ ಮತ ಪ್ರಯೋಗವಾದಂತಾಗಿದೆ.

ಸದ್ಯದ ಮಾಹಿತಿ ಪ್ರಕಾರ, ಬಿಜೆಪಿ ಅಭ್ಯರ್ಥಿ ಶಂಕರ್‌ ಲಲ್ವಾನಿ 9,90,698 ಮತ ಗಳಿಸಿದ್ದಾರೆ. ಅವರ ಹತ್ತಿರದ ಪ್ರತಿಸ್ಪರ್ಧಿ ಬಹುಜನ ಸಮಾಜವಾದಿ ಪಕ್ಷದ ಸಂಜಯ್‌ ಅವರು 42,095 ಮತಗಳನ್ನು ಗಳಿಸಿದ್ದಾರೆ. ಸಂಜಯ್‌ ಅವರಿಗಿಂತಲೂ ಹೆಚ್ಚು 2 ಲಕ್ಷ ‘ನೋಟಾ’ ಮತಗಳು ಬಿದ್ದಿರುವುದು ವಿಶೇಷ.
2019ರಲ್ಲಿ ಬಿಹಾರದ ಎಸ್‌ಸಿ ಮೀಸಲು ಕ್ಷೇತ್ರ ಗೋಪಾಲಗಂಜ್‌ನಲ್ಲಿ 51,660 ನೋಟಾ ಮತಗಳನ್ನು ಹಾಕಲಾಗಿತ್ತು. ಇದು ಈವರೆಗೆ ದಾಖಲೆಯಾಗಿತ್ತು. 2014ರಲ್ಲಿ ತಮಿಳುನಾಡಿನ ನೀಲಗಿರಿಯಲ್ಲಿ 46,559 ಮತ ಹಾಕಲಾಗಿತ್ತು.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ