ಜನಸಂಖ್ಯೆಯನ್ನು ಹೆಚ್ಚಿಸುವ ಗುರಿ: ರಷ್ಯಾ ಮಾಡಿರೋ ಹೊಸ ಪ್ರಯೋಗ ಕೇಳಿದ್ರೆ ಶಾಕ್ ಆಗ್ತೀರಾ!
![](https://www.mahanayaka.in/wp-content/uploads/2025/01/08b7885a6c68bb6f31b052f3a8925a12bdd8b1158471f562a9cbff4d14a2c91d.0.jpg)
ಜನಸಂಖ್ಯೆಯನ್ನು ಹೆಚ್ಚಿಸುವ ಗುರಿಯೊಂದಿಗೆ ರಷ್ಯಾ ಹೊಸ ಪ್ರಯೋಗಕ್ಕೆ ಇಳಿದಿದೆ. ಆರೋಗ್ಯಪೂರ್ಣ ಮಗುವಿಗೆ ಜನನ ನೀಡುವ 25 ವರ್ಷದ ಕೆಳಗಿನ ವಿದ್ಯಾರ್ಥಿನಿಯರಿಗೆ ಸುಮಾರು 81 ಸಾವಿರ ರೂಪಾಯಿ ನೀಡುವುದಾಗಿ ರಷ್ಯಾದ ಕರೇಲಿಯಾ ರಾಜ್ಯದ ಸರ್ಕಾರ ಘೋಷಿಸಿದೆ. ಜನವರಿ ಒಂದರಿಂದ ಈ ಹೊಸ ಯೋಜನೆ ಜಾರಿಗೆ ಬರಲಿದೆ.
ತಾಯಿ ಯಾವುದಾದರೂ ಯೂನಿವರ್ಸಿಟಿಯಲ್ಲಿ ಅಥವಾ ಕಾಲೇಜಿನಲ್ಲಿ ಪೂರ್ಣಕಾಲಿಕ ವಿದ್ಯಾರ್ಥಿನಿ ಆಗಿರಬೇಕು ಮತ್ತು ಪ್ರಾಯ 25 ವರ್ಷಕ್ಕಿಂತ ಕೆಳಗಿರಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ.
ಹಾಗಂತ ಜನಸಂಖ್ಯೆಯನ್ನು ಹೆಚ್ಚಿಸುವುದಕ್ಕಾಗಿ ತಾಯಂದಿರಿಗೆ ಆರ್ಥಿಕ ನೆರವಿನ ಘೋಷಣೆ ಮಾಡಿರುವ ರಾಜ್ಯಗಳಲ್ಲಿ ಕರೋಲಿಯ ಮೊದಲನೆಯದ್ದೇನೂ ಅಲ್ಲ. ಈಗಾಗಲೇ 11 ರಾಜ್ಯಗಳು ಇಂತಹ ಘೋಷಣೆ ಮಾಡಿವೆ.
2024ರ ಮೊದಲಾರ್ಧದಲ್ಲಿ 5,99,600 ಶಿಶುಗಳು ರಷ್ಯಾದಲ್ಲಿ ಜನಿಸಿರುವುದಾಗಿ ವರದಿಯಾಗಿದೆ. ಕಳೆದ 25 ವರ್ಷಗಳಲ್ಲೇ ಇದು ಅತ್ಯಂತ ಕಡಿಮೆ ಎಂದು ಹೇಳಲಾಗಿದೆ. 1990 ರಲ್ಲಿ 148 ಮಿಲಿಯನ್ ಜನಸಂಖ್ಯೆ ರಷ್ಯಾದಲ್ಲಿತ್ತು. ಆದರೆ ಈಗ ರಷ್ಯಾದ ಜನಸಂಖ್ಯೆ 146 ಮಿಲಿಯನ್ ಆಗಿ ಕುಸಿದಿದೆ. 2100 ನೇ ಇಸವಿಯ ವೇಳೆಗೆ ಈ ಜನಸಂಖ್ಯೆ 74 ಮಿಲಿಯನ್ ಆಗಿ ಕುಸಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj