ಏರ್ಪೋರ್ಟ್ ಗೆ ಬಸ್ ಬಿಡಬೇಕು ಎಂಬ ಬೇಡಿಕೆಯನ್ನು ರಾಮುಲು ಈಡೇರಿಸಿದ್ದಾರೆ: ನಳಿನ್ ಕುಮಾರ್ ಕಟೀಲ್
ಮಂಗಳೂರು: ಏರ್ಪೋರ್ಟ್ ಗೆ ಮಂಗಳೂರು ಹಾಗೂ ಮಣಿಪಾಲದಿಂದ ಹಲವು ವರ್ಷಗಳಿಂದ ಬಸ್ ಬಿಡಬೇಕು ಎಂಬ ಬೇಡಿಕೆ ಇತ್ತು. ಈ ಬೇಡಿಕೆಯನ್ನು ಸಚಿವ ಶ್ರೀರಾಮುಲು ಅವರು ಕೊನೆಗೂ ಈಡೇರಿಸಿದ್ದಾರೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಂಗಳೂರಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಅವ್ರು, ಈಗ ನಾವು ಮೂರು ಬಸ್ಸುಗಳನ್ನು ಬಿಟ್ಟಿದ್ದೇವೆ. ಈ ಬಸ್ಸು ಸಮಯಕ್ಕೆ ಸರಿಯಾಗಿ ಓಡಾಡುತ್ತದೆ. ವಿಮಾನಗಳ ಪ್ರಯಾಣ ಪ್ರಯಾಣದ ಸಮಯಕ್ಕೆ ಅನುಗುಣವಾಗಿ ಇಲ್ಲಿಂದ ಬಸ್ಸನ್ನು ಬಿಡುವ ಒಂದು ವೇಳಾಪಟ್ಟಿಯನ್ನು ರಚಿಸಲಾಗಿದೆ. ಈ ಹಿಂದೆ ಕೂಡ ಏರ್ಪೋರ್ಟಿಗೆ ಬಸವ ವ್ಯವಸ್ಥೆ ಇತ್ತು ಎಂದರು.
ಆದರೆ ಬೇರೆ ಬೇರೆ ಕಾರಣಗಳಿಂದ ಅದು ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಕೆಎಸ್ ಆರ್ ಟಿಸಿಯಿಂದ ಏರ್ಪೋರ್ಟ್ ಗೆ ವೋಲ್ವೋ ಬಸ್ ವ್ಯವಸ್ಥೆಯನ್ನ ಮಾಡಲಾಗಿದ್ದು, ಯಾವುದೇ ಕಾರಣಕ್ಕೂ ವಾಪಸ್ ಪಡೆಯುವ ಪ್ರಶ್ನೆ ಇಲ್ಲ ಎಂದು ಕಟೀಲ್ ಭರವಸೆ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka