ವಕ್ಫ್ ಕಾಯ್ದೆಗೆ ತಿದ್ದುಪಡಿ ವಿಚಾರ: ಅಖಿಲ ಭಾರತ ಮುಸ್ಲಿಂ ಬೋರ್ಡ್ ಖಂಡನೆ
ವಕ್ಫ್ ಕಾಯ್ದೆಗೆ ಶೇಕಡಾ 40ರಷ್ಟು ತಿದ್ದುಪಡಿಗಳನ್ನು ತರಲು ಕೇಂದ್ರ ಸರಕಾರ ಉದ್ದೇಶಿಸಿದೆ ಎಂದು ವರದಿಯಾಗಿದ್ದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಈ ಪ್ರಯತ್ನವನ್ನು ಖಂಡಿಸಿದೆ. ವಕ್ಫ್ ಮಂಡಳಿ ಅಧಿಕಾರವನ್ನು ಮೊಟಕುಗೊಳಿಸುವ ಯಾವುದೇ ಪ್ರಯತ್ನವನ್ನು ಬೋರ್ಡ್ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.
ಈ ತಿದ್ದುಪಡಿಗಳು ವಖ್ಫ್ ಮಂಡಳಿಯ ಅಧಿಕಾರವನ್ನು ಕಸಿದುಕೊಳ್ಳಲಿದೆ ಎಂದು ವರದಿಯಾಗಿದ್ದು ಈ ಮಸೂದೆಯನ್ನು ಮುಂದಿನ ವಾರ ಸಂಸತ್ತಿನಲ್ಲಿ ಸರ್ಕಾರ ಮಂಡಿಸಲಿದೆ ಎಂದು ಕೂಡ ವರದಿಗಳು ತಿಳಿಸಿವೆ. ವಖ್ಫ್ ಕಾಯ್ದೆ ಮತ್ತು ವಖ್ಫ್ ಆಸ್ತಿಗಳನ್ನು ಸಂವಿಧಾನ ಮತ್ತು ಶರೀಅತ್ ಅನ್ವಯಿಸುವ 1947ರ ಕಾಯ್ದೆ ಸಂರಕ್ಷಿಸುತ್ತದೆ.
ಆದ್ದರಿಂದ ಈ ಆಸ್ತಿಗಳ ಸ್ವರೂಪ ಅಥವಾ ಸ್ಥಿತಿಗತಿಯನ್ನು ಪರಿವರ್ತಿಸುವ ಇಲ್ಲವೇ ಬದಲಾಯಿಸುವ ಯಾವುದೇ ತಿದ್ದುಪಡಿಯನ್ನು ಬೋರ್ಡ್ ಒಪ್ಪಿಕೊಳ್ಳುವುದಿಲ್ಲ ಎಂದು ವಕ್ತಾರ SQR ಇಲ್ಯಾಸ್ ಹೇಳಿದ್ದಾರೆ.
ತ್ರಿವಳಿ ತಲಾಕ್ ನ ವಿರುದ್ಧ ಕಾನೂನು ತಂದ ಕೇಂದ್ರ ಸರಕಾರ ಮೌಲಾನಾ ನ ಆಜಾದ್ ಫೌಂಡೇಶನ್ ಮುಚ್ಚಿದೆ ಹಾಗೆಯೇ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನವನ್ನೂ ತಡೆಹಿಡಿದಿದೆ. ಹೀಗೆ ಮೋದಿ ಸರ್ಕಾರ ಸಂಪೂರ್ಣವಾಗಿ ಮುಸ್ಲಿಮರಿಗೆ ವಿರುದ್ಧವಾಗಿ ವರ್ತಿಸಿದೆ ಯೇ ಹೊರತು ಅವರ ಅಭಿವೃದ್ಧಿಗಾಗಿ ಯಾವ ಕೆಲಸವನ್ನೂ ಮಾಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth