ಅಲ್ಲಮಪ್ರಭು ಶ್ರೇಷ್ಠ ತತ್ವಜ್ಞಾನಿ : ಚಿಮಕೋಡೆ - Mahanayaka
3:03 AM Thursday 14 - November 2024

ಅಲ್ಲಮಪ್ರಭು ಶ್ರೇಷ್ಠ ತತ್ವಜ್ಞಾನಿ : ಚಿಮಕೋಡೆ

allama prabu
18/08/2024

ಔರಾದ್: ಜಗತ್ತಿನ ಶ್ರೇಷ್ಠ ತತ್ವಜ್ಞಾನಿಗಳಲ್ಲಿ ಒಬ್ಬರಾದ ಅಲ್ಲಮಪ್ರಭುಗೆ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಿಶಿಷ್ಟ ಸ್ಥಾನವಿದೆ. ಅಲ್ಲಮಪ್ರಭು ಅಧ್ಯಾತ್ಮಿಕ ಲೋಕದ ಚಿಂತಕರು ಎಂದು ಬೀದರ್ ನ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಸಂಚಾಲಕರಾದ ಸುವರ್ಣಾ ಚಿಮಕೋಡೆ ಹೇಳಿದರು.

ಪಟ್ಟಣದ ಅನುಭವ ಮಂಟಪದಲ್ಲಿ ಶ್ರಾವಣಮಾಸದ ನಿಮಿತ್ತ ಹಮ್ಮಿಕೊಂಡ ಬಸವತತ್ವ ದರ್ಶನ ವಿಷಯದ ಮೇಲೆ ಪ್ರವಚನದಲ್ಲಿ ಮಾತನಾಡಿದರು.

ಅಲ್ಲಮಪ್ರಭು 12ನೇ ಶತಮಾನದ ವಚನಕಾರರಲ್ಲಿ ಪ್ರಸಿದ್ಧರಾದರು. ನೇರ ನಿಷ್ಠುರವಾದಿ. ಅನೇಕ ಶಿವಶರಣರ, ಶಿವಶರಣಿಯರಿಗೆ ಭಕ್ತಿ–ವೈರಾಗ್ಯವನ್ನು ಭೋಧಿಸಿದರು. ತನ್ನ ವಚನಗಳ ಮೂಲಕ ಅಂತರಂಗ, ಬಹಿರಂಗಗಳನ್ನು ಶೋಧಿಸಲೆತ್ನಿಸಿದರು ಎಂದರು.
ಶಿವಶರಣರಲ್ಲಿ ಅಲ್ಲಮಪ್ರಭು ಪ್ರಮುಖರು. ಬಸವಣ್ಣನ ಕಲ್ಯಾಣಕ್ಕೆ ಬಂದ ಅಲ್ಲಮಪ್ರಭು ಅಲ್ಲಿ ಅನುಭವ ಮಂಟಪ ಶೂನ್ಯ ಪೀಠದ ಅಧ್ಯಕ್ಷರಾಗಿದ್ದರು. ಬಸವಣ್ಣನವರ ಸಮಕಾಲೀನನಾದ ಇವರು, ತಮ್ಮ ವಚನಗಳಲ್ಲಿ ಗಹನವಾದ ಅಧ್ಯಾತ್ಮ ಹಾಗೂ ತಾತ್ವಿಕ ವಿಚಾರಗಳಿಗೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ ಎಂದರು.

12ನೇ ಶತಮಾನದ ಶರಣರೂ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಸಾಹಿತ್ಯ ನೀಡಿದ್ದಾರೆ. ಸ್ತ್ರೀಯರಿಗೆ ಸಮಾನತೆ ದೊರಕಲು 12ನೇ ಶತಮಾನದವರೆಗೆ ಕಾಯಬೇಕಾಯಿತು. 12ನೇ ಶತಮಾನವನ್ನು ಸೂರ್ಯ, ಚಂದ್ರರಿರುವವರೆಗೂ ನೆನಪು ಮಾಡಿಕೊಳ್ಳುವಂತೆ ಮಾಡಿದವರು ಶರಣರು ಎಂದು ತಿಳಿಸಿದರು.




ಅನೇಕರು ಶರಣರ ಬಗ್ಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಆದರೆ ಶರಣರ ಬಗ್ಗೆ ಸಂಪೂರ್ಣ ತಿಳಿದುಕೊಳ್ಳುವ ಅಗತ್ಯವಿದೆ ಎಂದರು.

ನಿವೃತ್ತ ಪ್ರೊ.ಕಾರ್ತಿಕ ಸ್ವಾಮಿ ಅವರು ದಾಸೋಹ ವ್ಯವಸ್ಥೆ ಮಾಡಿದರು. ಪ್ರಮುಖರಾದ ಪ್ರಕಾಶ ಘೂಳೆ, ಡಾ. ಧನರಾಜ ರಾಗಾ, ಚಂದ್ರಕಾಂತ ಘೂಳೆ, ಮನ್ಮಥಪ್ಪ ಬಿರಾದಾರ್, ಹಿರಿಯ ಪತ್ರಕರ್ತ ಶರಣಪ್ಪ ಚಿಟಮೇ, ಕಲ್ಯಾಣರಾವ ಶೆಂಬೆಳ್ಳಿ, ಅಮೃತರಾವ ಬಿರಾದಾರ್, ವಿದ್ಯಾವತಿ ಎಡವೆ ಸೇರಿದಂತೆ ಅನೇಕರಿದ್ದರು.

ವರದಿ: ವಿಕುಮಾರ ಸಿಂಧೆ


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ