ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ದಿನ | ಕ್ಯಾಂಡಲ್ ಜಾಥಾ ಹಾಗೂ ಮಹಾನಾಯಕ ಕಟೌಟ್ ಉದ್ಘಾಟನೆ - Mahanayaka

ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ದಿನ | ಕ್ಯಾಂಡಲ್ ಜಾಥಾ ಹಾಗೂ ಮಹಾನಾಯಕ ಕಟೌಟ್ ಉದ್ಘಾಟನೆ

07/12/2020

ಬೆಂಗಳೂರು:  ನಂದಿನಿ ಬಡಾವಣೆಯ ಕಂಠೀರವ ನಗರದ‌ ಗ್ರಾಮಸ್ಥರು ಮಹಾನಾಯಕ ಧಾರಾವಾಹಿ ಅಭಿನಂದನಾ ಕಟೌಟ್  ಉದ್ಘಾಟನೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ದಿನಾಚರಣೆಯನ್ನು ಕ್ಯಾಂಡಲ್ ಜಾಥಾದ ಮೂಲಕ ಆಚರಿಸಿದರು.

ಕಂಠೀರವ ನಗರದ ಸಕಲ ಗ್ರಾಮಸ್ಥರು ಡಾ.ಬಿ.ಆರ್ ಅಂಬೇಡ್ಕರ್ ರ 64ನೇ ಪರಿನಿಬ್ಬಾಣ ದಿನಾಚರಣೆಯನ್ನು ಕಂಠೀರವ ನಗರದ ಮೊದಲನೆಯ ಹಂತದಿಂದ ಎರಡನೇ ಹಂತದಲ್ಲಿನ ಡಾ.ಅಂಬೇಡ್ಕರ್ ಪುತ್ಥಳಿಗೆ ಕ್ಯಾಂಡಲ್ ಜಾಥಾ ನಡೆಸುವ ಮೂಲಕ ನಮನ ಸಲ್ಲಿಸಿದರು. ಬಳಿಕ   ಕಂಠೀರವ ಟೆಂಟ್ ಸರ್ಕಲ್ ನಲ್ಲಿ ಮಹಾನಾಯಕ ಧಾರಾವಾಹಿ ಕಟೌಟ್ ಉದ್ಘಾಟನೆ ಮಾಡಿದರು.

ಕಂಠೀರವ ನಗರದ ಗ್ರಾಮಸ್ಥರಾದ ವೆಂಕಟರಾಜು ಹಾಗೂ  ಜೈಭೀಮ್ ಯುವಕರ ಸಂಘ ರಾಜ್ಯಾಧ್ಯಕ್ಷರಾದ ಮಹೇಶರವರು ಮಾತನಾಡಿ,  ಭಾರತದಲ್ಲಿ ಇಷ್ಟು ವರ್ಷಗಳ ಕಾಲ ಅಂಬೇಡ್ಕರ್ ಕೊಡುಗೆಗಳನ್ನು ಜನಸಾಮಾನ್ಯರಿಗೆ ಮುಚ್ಚಿಟ್ಟು ಇತಿಹಾಸ ಮರೆಮಾಚಲಾಗಿದ್ದು ಮಹಾನಾಯಕ ಧಾರಾವಾಹಿ ಡಾ.ಅಂಬೇಡ್ಕರ್ ರ ಸಕಲ ಹೋರಾಟ ಕೊಡುಗೆಯನ್ನು ಜ್ಞಾಪಿಸುತ್ತಿದೆ ಎಂದರು. ಮಹಾನಾಯಕ ಧಾರಾವಾಹಿ ಪ್ರಸಾರ ಮಾಡುವ ಜೀ ಕನ್ನಡ ವಾಹಿನಿಗೆ ನಾವೆಲ್ಲರೂ ಚಿರರುಣಿಯಾಗಿರಬೇಕೆಂದು ಧನ್ಯವಾದ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ಎಲ್.ಇ.ಡಿಯ ಮೂಲಕ ಡಾ.ಅಂಬೇಡ್ಕರ್ ರ ಕೊಡುಗೆ ಸಾಧನೆ,ಹೋರಾಟವನ್ನು ಬಿತ್ತರಿಸುವ ಮೂಲಕ ಜನರಿಗೆ ಸಂದೇಶ ನೀಡಿದರು.

ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಸ್ನೇಹಿತರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬರಹಗಾರ, ಯುವಕವಿ ಪರಶುರಾಮ್. ಆಯೋಜಕ ಕುಮಾರ್. ವಿಜಯಭಾಸ್ಕರ್. ಬಸವರಾಜ್.  ವೆಂಕಟರಾಜು. ಬೈಲರಾಜು. ಜೈಭೀಮ್ ಯುವಕರ ಸಂಘ ರಾಜ್ಯಾಧ್ಯಕ್ಷರಾದ ಮಹೇಶ್ ಹಾಗೂ ಕಂಠೀರವ ನಗರದ ಒಂದನೇ ಮತ್ತು ಎರಡನೇ ಹಂತದ ಸಕಲ ಗ್ರಾಮಸ್ಥರು ಭಾಗವಹಿಸಿದರು.
 

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ