ಕಂಟೈನರ್ ನಡಿಗೆ ಬಿದ್ದು ಬೈಕ್ ಸವಾರನ ದಾರುಣ ಸಾವು: ಇಂದು ಮಧ್ಯಾಹ್ನ ನಡೆದ ಘಟನೆ - Mahanayaka

ಕಂಟೈನರ್ ನಡಿಗೆ ಬಿದ್ದು ಬೈಕ್ ಸವಾರನ ದಾರುಣ ಸಾವು: ಇಂದು ಮಧ್ಯಾಹ್ನ ನಡೆದ ಘಟನೆ

06/12/2020

ಮಂಗಳೂರು: ಕಂಟೈನಡಿಗೆ ಬಿದ್ದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಗರದ ಪಡೀಲ್ ನಲ್ಲಿ ನಡೆದಿದ್ದು, ನಂತೂರಿನ ಕಡೆಯಿಂದ ಪಡೀಲ್  ಕಡೆಗೆ ಬರುತ್ತಿದ್ದ ಕಂಟೈನರ್ ಗೆ ಬೈಕ್ ಡಿಕ್ಕಿ ಹೊಡೆದಿದೆ.

ನೀರುಮಾರ್ಗದ ಮನ್ವಿತ್(22) ಮೃತಪಟ್ಟ ಬೈಕ್ ಸವಾರ.  ರವಿವಾರ 11:45ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಮೃತ ಮನ್ವಿತ್ ಪ್ರಯಾಣಿಸುತ್ತಿದ್ದ ಬೈಕ್  ಡಿವೈಡರ್ ಗೆ ಡಿಕ್ಕಿ ಹೊಡೆದು ಹಾರಿದ್ದು, ಈ ವೇಳೆ ಬೈಕ್ ನಿಂದ ಎಸೆಯಲ್ಪಟ್ಟ ಮನ್ವಿತ್ ಎದುರಿನಿಂದ ಬರುತ್ತಿದ್ದ ಕಂಟೈನರ್ ನ ಅಡಿಗೆ ಬಿದ್ದಿದ್ದಾರೆ.  ಈ ಸಂದರ್ಭದ ಅವರ ಮೇಲೆ ಕಂಟೈನರ್ ಹರಿದು ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ