ಅನಕ್ಷರಸ್ತರ ಎದೆಯಲ್ಲಿ ನಾಲ್ಕಕ್ಷರ ಗೀಚಲು ಶಿಕ್ಷಣದ ಕಿಚ್ಚು ಹಚ್ಚಿದ ಭೀಮ - Mahanayaka
9:32 PM Wednesday 6 - December 2023

ಅನಕ್ಷರಸ್ತರ ಎದೆಯಲ್ಲಿ ನಾಲ್ಕಕ್ಷರ ಗೀಚಲು ಶಿಕ್ಷಣದ ಕಿಚ್ಚು ಹಚ್ಚಿದ ಭೀಮ

06/12/2020

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ “ಮಹಾನಾಯಕ” ಧಾರಾವಾಹಿಯಲ್ಲಿ ಇಂದು ಬಹಳ ಕುತೂಹಲ ಕೆರಳಿಸುವ ಸನ್ನಿವೇಶಗಳು ಮೂಡಿಬರಲಿವೆ. ಬಾಲಭೀಮ ತನ್ನ ಸಮುದಾಯಕ್ಕೆ ಶಿಕ್ಷಣ ದೊರಕಬೇಕು ಎನ್ನುವ ಹೋರಾಟವನ್ನು ನಿರಂತರಗೊಳಿಸಿದ್ದಾನೆ. ಇಂದು 6:30ಕ್ಕೆ ಪ್ರಸಾರವಾಗುವ ಮಹಾನಾಯಕ ಧಾರಾವಾಹಿಯಲ್ಲಿ ಅಂಬೇಡ್ಕರರ ಹೋರಾಟದ ಅದ್ಭುತ ದೃಶ್ಯಗಳನ್ನು ವೀಕ್ಷಕರು ಕಾಣಬಹುದಾಗಿದೆ.

ಬಾಲಕ ಭೀಮ್ ರಾವ್ ಶಿಕ್ಷಣದಿಂದ ವಂಚಿತರಿಗೆ ಶಿಕ್ಷಣ ನೀಡಬೇಕು ಎಂದು ಮುಂದೆ ಹೆಜ್ಜೆ ಇಟ್ಟಿದ್ದಾನೆ. ಅದಕ್ಕಾಗಿ ತನ್ನ ಅಣ್ಣ ಆನಂದ್ ಹಾಗೂ ತನ್ನ ಸ್ನೇಹಿತ ಹಾಗೂ ಅಂಬೇಡ್ಕರ್ ಗುರುಗಳ ಸಹಕಾರವನ್ನು ಭೀಮ ಪಡೆದುಕೊಂಡಿದ್ದಾನೆ. ಇದೇ ಸಂದರ್ಭದಲ್ಲಿ, ಬಾಲ ಭೀಮ ಎಲ್ಲರ ಎದೆಯಲ್ಲಿ ಶಿಕ್ಷಣದ ಕಿಚ್ಚನ್ನು ಹತ್ತಿಸುತ್ತಾನೆ ಎಂಬ ಭಯದಿಂದ ಶೇಟ್ ಜೀ ಅದನ್ನು ಹೇಗಾದರೂ ತಡೆಯಬೇಕು ಎಂದು ಪ್ಲಾನ್ ಮಾಡಿದ್ದಾನೆ.

ಶಿಕ್ಷಣದ ಹೋರಾಟವನ್ನು ಆರಂಭಿಸಿರುವ ಬಾಲ ಭೀಮ ಹಾಗೂ ಇದಕ್ಕೆ ಸಮಾಜದಲ್ಲಿ ಎದುರಾಗುವ ವಿರೋಧ ಇವೆಲ್ಲವನ್ನೂ ಪರಿಹರಿಸಿ ಜನರ ಎದೆಯಲ್ಲಿ ಶಿಕ್ಷಣವನ್ನು ಬಿತ್ತಲು ಬಾಲ ಭೀಮ ಏನು ಮಾಡುತ್ತಾನೆ ಎನ್ನುವುದು ಈ ದಿನದ ಸಂಚಿಕೆಯಲ್ಲಿ ಪ್ರಧಾನವಾಗಿ ಕಾಣಸಿಗುತ್ತದೆ. ಇಂದಿನ ಸಂಚಿಕೆ ಕೆಲವು ಭಾಗಗಳನ್ನು ಈ ಕೆಳಗಿನ ವಿಡಿಯೋದನ್ನು ನೋಡಬಹುದಾಗಿದೆ.

ಇತ್ತೀಚಿನ ಸುದ್ದಿ