ಬೆಳ್ತಂಗಡಿ ಸೇತುವೆ ಬಳಿ ಮಗುಚಿ ಬಿದ್ದ ಆ್ಯಂಬುಲೆನ್ಸ್: ಓರ್ವ ವೈದ್ಯ ಸಹಿತ, ಮೂವರಿಗೆ ಗಾಯ - Mahanayaka

ಬೆಳ್ತಂಗಡಿ ಸೇತುವೆ ಬಳಿ ಮಗುಚಿ ಬಿದ್ದ ಆ್ಯಂಬುಲೆನ್ಸ್: ಓರ್ವ ವೈದ್ಯ ಸಹಿತ, ಮೂವರಿಗೆ ಗಾಯ

belthangady
05/12/2022

ಬೆಳ್ತಂಗಡಿ: ಕಕ್ಕಿಂಜೆಯ ಖಾಸಗಿ ಆಸ್ಪತ್ರೆಗೆ ಸೇರಿದ  ಆ್ಯಂಬುಲೆನ್ಸ್ ಬೆಳ್ತಂಗಡಿ ಸೇತುವೆ ಬಳಿ ಪಲ್ಟಿಯಾದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಅಪಘಾತದಿಂದಾಗಿ ಆ್ಯಂಬುಲೆನ್ಸ್ ನಲ್ಲಿದ್ದ ಓರ್ವ ವೈದ್ಯ ಸೇರಿ ಒಟ್ಟು ಮೂವರಿಗೆ ಗಾಯಗಳಾಗಿವೆ. ಈ ಪೈಕಿ ವೈದ್ಯ ಡಾ.‌‌ನಿತಿನ್ ಅವರಿಗೆ ಕೈಯಲ್ಲಿ ಮೂಳೆ‌ ಮುರಿತಕ್ಕೊಳಗಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನಿಬ್ಬರು ಗಾಯಾಳುಗಳಾದ ಆಸ್ಪತ್ರೆಯ ಸಿಬ್ಬಂದಿಗಳಾದ ರಿತೇಶ್ ಮತ್ತು ಹುಝೈರ್ ಎಂಬವರಾಗಿದ್ದಾರೆ. ಇವರಿಬ್ಬರಿಗೂ ಸಣ್ಣ ಗಾಯಗಳಾಗಿದ್ದು  ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ವೇಳೆ ಆ್ಯಂಬುಲೆನ್ಸ್ ನಲ್ಲಿ ರೋಗಿಗಳು ಇರಲಿಲ್ಲ ಎಂದು ತಿಳಿದು ಬಂದಿದೆ.

ಮೆಡಿಸಿನ್ ಪಾರ್ಸೆಲ್ ವಿಚಾರವಾಗಿ ಆಂಬುಲೆನ್ಸ್ ನಲ್ಲಿ ಬೆಳ್ತಂಗಡಿಗೆ ಬಂದಿದ್ದರು ಎಂದು ಗೊತ್ತಾಗಿದೆ. ಅಪಘಾತದಿಂದಾಗಿ ಬೊಲೆರೋ ಆ್ಯಂಬುಲೆನ್ಸ್ ವಾಹನ ಬಹುತೇಕ ನುಜ್ಜುಗುಜ್ಜಾಗಿದೆ.

ಘಟನೆಯಿಂದ ಸುಮಾರು ಅರ್ಧ ತಾಸು ಟ್ರಾಫಿಕ್ ಜಾಮ್ ಕೂಡ ಉಂಟಾಯಿತು. ತಕ್ಷಣ ಸ್ಪಂದಿಸಿದ ಬೆಳ್ತಂಗಡಿ ಟ್ರಾಫಿಕ್ ಪೊಲೀಸರು ನಾಗರಿಕರ ಸಹಕಾರದಿಂದ ವಾಹನ ಸಂಚಾರ ಸುಗಮಗೊಳಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ