ತ.ನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಅಣ್ಣಾಮಲೈ: ಆ ನಾಯಕನ ಒತ್ತಡವೇ ಪದಚ್ಯುತಿಗೆ ಕಾರಣ!

ಚೆನ್ನೈ: ತಮಿಳುನಾಡು ಬಿಜೆಪಿಯ ಹಾಲಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರ ಪದಚ್ಯುತಿ ಶೀಘ್ರದಲ್ಲೇ ಆಗಲಿದ್ದು, ತಮಿಳುನಾಡು ಬಿಜೆಪಿಗೆ ನೂತನ ಸಾರಥಿಯನ್ನು ಶೀಘ್ರವೇ ಪಕ್ಷ ನೇಮಕ ಮಾಡಲಿದೆ ಎನ್ನಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಹಲವು ವಿವಾದಗಳನ್ನು ಅಣ್ಣಾಮಲೈ ಮೈಮೇಲೆ ಎಳೆದುಕೊಂಡಿದ್ದರು. ಆದರೂ ಅಣ್ಣಾಮಲೈ ಅವರ ಕಾರ್ಯನಿಷ್ಠೆ ಬಿಜೆಪಿ ಹೈಕಮಾಂಡ್ ಗೆ ಅಚ್ಚುಮೆಚ್ಚಾಗಿತ್ತು. ಆದ್ರೆ ತಮಿಳುನಾಡಿನ ಪ್ರಭಾವಿ ನಾಯಕನ ಒತ್ತಡಕ್ಕೆ ಮಣಿದು ಅಣ್ಣಾಮಲೈ ಅವರನ್ನ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ ಅನ್ನೋ ಮಾತುಗಳು ಕೇಳಿ ಬಂದಿವೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರ ಒತ್ತಡಕ್ಕೆ ಮಣಿದು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಅಣ್ಣಾಮಲೈ ಅವರನ್ನ ಕೆಳಗಿಳಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಅಣ್ಣಾಮಲೈ ವಿಪಕ್ಷಗಳನ್ನ ಟೀಕಿಸುವ ಭರದಲ್ಲಿ ಓವರ್ ಆಗಿ ಮಾತನಾಡುತ್ತಾರೆ ಎನ್ನುವುದು ಒ.ಪನ್ನೀರ್ ಸೆಲ್ವಂ ಅವರಿಗೆ ಅಣ್ಣಾಮಲೈ ಮೇಲೆ ಕೋಪ ಬರಲು ಕಾರಣವಂತೆ, ಅಣ್ಣಾಮಲೈ ಓವರ್ ಆಗಿ ಆಡ್ತಾರೆ.. ಅಂತ ಅಣ್ಣಾಮಲೈ ನಡೆಯನ್ನ ಒ.ಪನ್ನೀರ್ ಸೆಲ್ವಂ ಬಹಿರಂಗವಾಗಿಯೇ ಟೀಕಿಸಿದ್ದರು.
ಅಣ್ಣಾಮಲೈ ಬಿಜೆಪಿ ಪಕ್ಷದ ಅಧ್ಯಕ್ಷರಾಗಿ ಮುಂದುವರಿದರೆ 2026ರ ತಮಿಳುನಾಡು ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಎಐಎಡಿಎಂಕೆ ಮೈತ್ರಿ ಸಾಧ್ಯವಿಲ್ಲ ಎಂದು ಒ.ಪನ್ನೀರ್ ಸೆಲ್ವಂ ನೇರವಾಗಿಯೇ ಹೇಳಿದ್ದು, ಹೀಗಾಗಿ ಬಿಜೆಪಿ ಹೈಕಮಾಂಡ್ ಅಣ್ಣಾಮಲೈ ಅವರನ್ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಮುಂದಾಗಿದೆ ಎನ್ನಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: