ಮತ್ತೊಂದು ಪಟಾಕಿ ದುರಂತ: 9 ಮಂದಿ ಸಜೀವ ದಹನ, ಹಲವರಿಗೆ ಗಾಯ - Mahanayaka

ಮತ್ತೊಂದು ಪಟಾಕಿ ದುರಂತ: 9 ಮಂದಿ ಸಜೀವ ದಹನ, ಹಲವರಿಗೆ ಗಾಯ

tamil nadu
17/10/2023


Provided by

ತಮಿಳುನಾಡಿನ ಶಿವಕಾಶಿ ಬಳಿಯ ಪಟಾಕಿ ತಯಾರಿಕಾ ಕಾರ್ಖಾನೆಗಳಲ್ಲಿ  ಪಟಾಕಿ ದುರಂತ ಸಂಭವಿಸಿದ್ದು, ಕನಿಷ್ಠ 9 ಮಂದಿ ಸಜೀವ ದಹನವಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಮಂಗಳವಾರ ತಮಿಳುನಾಡಿನ ಎರಡು ಪ್ರದೇಶದಲ್ಲಿ ಅವಳಿ ಪಟಾಕಿ ದುರಂತ ಸಂಭವಿಸಿದ್ದು, ತಮಿಳುನಾಡಿನ ವಿರುಧುನಗರ ಜಿಲ್ಲೆಯ ಶಿವಕಾಶಿ ಬಳಿಯ ಪಟಾಕಿ ತಯಾರಿಕಾ ಕಾರ್ಖಾನೆ  ಮೊದಲು ಪಟಾಕಿ ದುರಂತ ಸಂಭವಿಸಿದೆ. ಬಳಿಕ ಅದೇ ಜಿಲ್ಲೆಯ ಕಮ್ಮಾಪಟ್ಟಿ ಗ್ರಾಮದ ಮತ್ತೊಂದು ಘಟಕದಲ್ಲಿ ಎರಡನೇ ಸ್ಫೋಟ ಸಂಭವಿಸಿದೆ.

ದುರಂತದಲ್ಲಿ ಈವರೆಗೆ 9 ಮಂದಿ ಮೃತಪಟ್ಟಿರೋದಾಗಿ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ ಹಲವರಿಗೆ ತೀವ್ರವಾದ ಗಾಯಗಳಾಗಿವೆ.  ಸ್ಥಳದಲ್ಲಿ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ