ಕುಂಭಮೇಳದಲ್ಲಿ ಮತ್ತೊಂದು ಅವಘಡ: 15 ಡೇರೆಗಳು ಸುಟ್ಟು ಭಸ್ಮ

ಪ್ರಯಾಗ್ ರಾಜ್: ಮಹಾಕುಂಭ ಮೇಳದಲ್ಲಿ ಅವಘಡಗಳ ಬೆನ್ನಲ್ಲೇ ಅವಘಡಗಳು ನಡೆಯುತ್ತಿವೆ. ಕುಂಭಮೇಳ ಆರಂಭದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು, ಬಳಿಕ ಕಾಲ್ತುಳಿತಕ್ಕೆ 30 ಮಂದಿಯ ಪ್ರಾಣ ಹೋಗಿದೆ. ಇದೀಗ ಮತ್ತೆ ಅವಘಡ ಸಂಭವಿಸಿದ್ದು, ಅಗ್ನಿ ಅವಘಡಕ್ಕೆ 15 ಡೇರೆಗಳು ಸುಟ್ಟು ಹೋಗಿವೆ.
ಮಹಾಕುಂಭ ಮೇಳ ಪ್ರದೇಶ ಸೆಕ್ಟರ್ 22ರ ಹೊರ ವಲಯದಲ್ಲಿ ಈ ದುರ್ಘಟನೆ ನಡೆದಿದೆ. ಚಾಮನ್ ಗಂಜ್ ಚೌಕಿ ಬಳಿಯ ಡೇರೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ತಕ್ಷಣವೇ ಬೆಂಕಿಯನ್ನು ನಂದಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಪ್ರದೇಶಕ್ಕೆ ಸರಿಯಾದ ರಸ್ತೆ ಕಲ್ಪಿಸದ ಹಿನ್ನೆಲೆ ಅಗ್ನಿ ಅವಘಡ ಸಂಭವಿಸಿದ ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪಲು ಸಾಧ್ಯವಾಗಿಲ್ಲ. ಹೀಗಾಗಿ ಡೇರೆಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಬೆಂಕಿ ಅವಘಡಕ್ಕೊಳಗಾಗಿರುವ ಪ್ರದೇಶದಲ್ಲಿದ್ದ ಡೇರೆಗಳು ಅನಧಿಕೃತವಾಗಿದ್ದವು ಎಂದು ಅಧಿಕಾರಿಗಳ ಘಟನೆಯ ಬಳಿಕ ತಿಳಿಸಿದ್ದಾರೆ.
ಅದೃಷ್ಟವಶಾತ್ ಸಾವು ನೋವು ಸಂಭವಿಸಿಲ್ಲ. ಬೆಂಕಿ ಹತ್ತಿಕೊಳ್ಳಲು ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4