ತಂದೆಯ ಅಂತ್ಯಸಂಸ್ಕಾರಕ್ಕೆ ಹೂವು ತರಲು ಹೋದ ಪುತ್ರ ಅಪಘಾತಕ್ಕೆ ಬಲಿ - Mahanayaka

ತಂದೆಯ ಅಂತ್ಯಸಂಸ್ಕಾರಕ್ಕೆ ಹೂವು ತರಲು ಹೋದ ಪುತ್ರ ಅಪಘಾತಕ್ಕೆ ಬಲಿ

15/03/2021

ಕಾರವಾರ: ಅಂತ್ಯ ಸಂಸ್ಕಾರಕ್ಕೆ ಹೂವು ತರಲು ಬೈಕ್ ನಲ್ಲಿ ಹೋಗುತ್ತಿದ್ದ ಇಬ್ಬರು ಯುವಕರಿಗೆ ಬಸ್ ಡಿಕ್ಕಿಯಾಗಿ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಶಿರಸಿ ನಗರದ ಎಸ್ ಬಿ ಐ ಸರ್ಕಲ್ ಬಳಿಯಲ್ಲಿ ನಡೆದಿದೆ.

ಶಿರಸಿಯ ಗಣೇಶ ನಗರದ ನಿವಾಸಿಗಳಾದ   34 ವರ್ಷ ವಯಸ್ಸಿನ ರವಿಚಂದ್ರ ವಡ್ಡರ್ ಹಾಗೂ 26 ವರ್ಷ ವಯಸ್ಸಿನ ಇಂದೂರ ಮೃತಪಟ್ಟವರಾಗಿದ್ದಾರೆ. ರವಿಚಂದ್ರ ಅವರ ತಂದೆ ಹನುಮಂತಪ್ಪ ಇಂದು ಮೃತಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರಕ್ಕೆ ಹೂವು ತರಲು ಹೋಗುತ್ತಿದ್ದ ವೇಳೆ ಇನ್ನೊಂದು ರಸ್ತೆಯಿಂದ ಬಂದ ಬಸ್ ಡಿಕ್ಕಿಯಾಗಿದೆ.

ಬಸ್ ಡಿಕ್ಕಿಯಾದ ವೇಳೆ ಬೈಕ್ ನಲ್ಲಿದ್ದ ಇಬ್ಬರು ಯುವಕರು ಕೂಡ ಬಸ್ಸಿನಡಿಗೆ ಬಿದ್ದಿದ್ದು,  ಬಸ್ ನ ಚಕ್ರದಡಿಯಲ್ಲಿ ಸಿಲುಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.    ಘಟನೆ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ