ಈ ಸಹಾಯಧನಕ್ಕಾಗಿ ಅರ್ಹರು ಅರ್ಜಿ ಸಲ್ಲಿಸಿ - Mahanayaka

ಈ ಸಹಾಯಧನಕ್ಕಾಗಿ ಅರ್ಹರು ಅರ್ಜಿ ಸಲ್ಲಿಸಿ

08/12/2020

ಶಿವಮೊಗ್ಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2020-21ನೇ ಸಾಲಿನ ಸಾಮಾನ್ಯ ವರ್ಗ, ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆ ಅಡಿ ಸಂಗೀತ, ನೃತ್ಯ, ಜಾನಪದ, ನಾಟಕ, ಯಕ್ಷಗಾನ, ಚಿತ್ರಕಲೆ, ಶಿಲ್ಪಕಲೆ ಮುಂತಾದ ಪ್ರಕಾರಗಳಿಗೆ ಅರ್ಹ ನೋಂದಾಯಿತ ಸಂಘ-ಸಂಸ್ಥೆಗಳಿಗೆ ಹಾಗೂ ಅಸಂಘಟಿತ ಕಲಾವಿದರಿಗೆ ಸಂಘ-ಸಂಸ್ಥೆಗಳ ದನಸಹಾಯ, ವಾದ್ಯ ಪರಿಕರ ಹಾಗೂ ವೇಷಭೂಷಣ ಖರೀದಿಗಾಗಿ ಮತ್ತು ಚಿತ್ರ/ಶಿಲ್ಪ ಕಲಾವಿದರ ಕಲಾಕೃತಿಗಳ ಪ್ರದರ್ಶನಕ್ಕೆ ಅರ್ಜಿ ಆಹ್ವಾನಿಸಿದೆ.


Provided by

ಆಸಕ್ತರು ಇಲಾಖೆಯ ಸೇವಾ ಸಿಂಧು ಪೋರ್ಟಾಲ್ sevashindhu.karnataka.gov.in ರ ಮೂಲಕ ದಿ: 27.12.2020 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-223354, 080-22230282/ 22279954ಗಳನ್ನು ಅಥವಾ ಇಲಾಖಾ ವೆಬ್‍ಸೈಟ್ www.kannadasiri.karnataka.gov.in ನ್ನು ಸಂಪರ್ಕಿಸುವುದು.


Provided by

ಇತ್ತೀಚಿನ ಸುದ್ದಿ