ಮನೆ ಕಳವು ಮಾಡುತ್ತಿದ್ದ ಆರೋಪಿಯ ಬಂಧನ: 1 ಲಕ್ಷ ರೂ. ಮೌಲ್ಯದ ಸೊತ್ತು ವಶ
ಬೆಂಗಳೂರು:ಉತ್ತರ ವಿಭಾಗ ಮಲ್ಲೇಶ್ವರಂ ಪೊಲೀಸರ ಕಾರ್ಯಾಚರಣೆ ನಡೆಸಿ ಮನೆ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, ಒಟ್ಟು ಸುಮಾರು 1 ಲಕ್ಷ ರೂ.ಮೌಲ್ಯದ ಬೆಳ್ಳಿ ಮತ್ತು ಕಂಚಿನ ವಸ್ತುಗಳ ವಶಪಡಿಸಿಕೊಂಡಿದ್ದಾರೆ.
ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ದಿನಾಂಕ 10/08/2023 ರಂದು ಮನೆಯ ಬಾಗಿಲು ಬೀಗ ಮುರಿದು ಚಿನ್ನ, ಬೆಳ್ಳಿ ಮತ್ತು ಕಂಚಿನ ದೇವರ ಸಾಮಗ್ರಿಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು, ಪಿರ್ಯಾದುದಾರರು ನೀಡಿದ ದೂರಿನ ಮೇರೆಗೆ, ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.
ಸದರಿ ಪ್ರಕರಣದ ತನಿಖೆಯನ್ನು ಕೈಗೊಂಡು ಕಾರ್ಯಪೃವೃತ್ತರಾದ ಪೊಲೀಸರು ಕೃತ್ಯ ನಡೆದ ಸ್ಥಳದ ಸಮೀಪದ ಹಲವಾರು ಸಿ.ಸಿ.ಟಿ.ವಿಗಳನ್ನು ಪರಿಶೀಲಿಸಿ, ದಿನಾಂಕ 14/08/2023 ರಂದು ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ, ಆತನು ನೀಡಿದ ಮಾಹಿತಿ ಮೇರೆಗೆ, ಸುಮಾರು 1 ಲಕ್ಷ ಬೆಲೆಬಾಳುವ ಕಂಚಿನ, ಬೆಳ್ಳಿಯ, ಹಿತ್ತಾಳೆಯ ದೇವರ ವಿಗ್ರಹಗಳೊನ್ನೊಳಗೊಂಡಂತೆ, ಬೆಳ್ಳಿಯ, ಕಂಚಿನ, ಹಿತ್ತಾಳೆಯ ಪೂಜಾ ಸಾಮಗ್ರಿಗಳನ್ನು ವಶಪಡಿಸಿಕೊಳ್ಳುವಲ್ಲಿ ಮಲ್ಲೇಶ್ವರಂ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಈ ಪ್ರಕರಣದಲ್ಲಿ ಶಿವಪ್ರಕಾಶ್ ದೇವರಾಜು, ಉಪ ಪೊಲೀಸ್ ಆಯುಕ್ತ, ಉತ್ತರ ವಿಭಾಗ ರವರ ಮಾರ್ಗದರ್ಶನದಲ್ಲಿ ಕೃಷ್ಣಮೂರ್ತಿ ಕೆ., ಸಹಾಯಕ ಪೊಲೀಸ್ ಆಯುಕ್ತರು. ಮಲ್ಲೇಶ್ವರಂ ಉಪ-ವಿಭಾಗ ಇವತ ನೇತೃತ್ವದಲ್ಲಿ ಚಂದ್ರಶೇಖರ್, ಎಂ. ಪೊಲೀಸ್ ಇನ್ಸ್ಪೆಕ್ಟರ್. ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.




























