ಅಮಲು ಪದಾರ್ಥ ಸೇವಿಸಿ ಪತ್ನಿಯ ಕಾಲು ಮುರಿದ ಪತಿ! - Mahanayaka

ಅಮಲು ಪದಾರ್ಥ ಸೇವಿಸಿ ಪತ್ನಿಯ ಕಾಲು ಮುರಿದ ಪತಿ!

belthangady
15/12/2022

ಬೆಳ್ತಂಗಡಿ: ಅಮಲು ಪದಾರ್ಥ ಸೇವಿಸಿ ಪತ್ನಿಯ ಮೇಲೆ ಹಲ್ಲೆ ನಡೆಸಿದ ಪತಿ, ಆಕೆಯ ಕಾಲು ಮುರಿದ ಘಟನೆ ನಾವೂರಿನಲ್ಲಿ ಸಂಭವಿಸಿದೆ.

ಸೈನಾಜ್ (27) ಎಂಬಾಕೆಯೇ ಹಲ್ಲೆಗೆ ಒಳಗಾದ ವ್ಯಕ್ತಿಯಾಗಿದ್ದಾರೆ. ಈಕೆಯ  ಪತಿ ಅಬ್ದುಲ್ ಆರಿಫ್ ಎಂಬಾತನೇ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ. ಇವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದು ಇವರಿಗೆ ಇಬ್ಬರು ಮಕ್ಕಳು ಇದ್ದಾರೆ.

ಅಬ್ದುಲ್ ಆರಿಫ್ ಮದ್ಯ ಹಾಗೂ ಇತರ ಅಮಲು ಪದಾರ್ಥಗಳನ್ನು ಸೇವಿಸುವ ಚಟ ಹೊಂದಿದ್ದ. ಡಿ.11ರಂದು ಪತಿ ಪತ್ನಿಯರು ಮಕ್ಕಳೊಂದಿಗೆ ಇಂದಬೆಟ್ಟುವಿಗೆ ಹೋಗುತ್ತಿದ್ದ ವೇಳೆ ನಾವೂರಿನಲ್ಲಿ ಬೈಕ್ ಕೆಟ್ಟು ಹೋಗಿದೆ. ಅಲ್ಲಿಯೇ ಸಮೀಪವಿರುವ ಸೈನಾಜ್ ನ ಅಣ್ಣನ ಮನೆಗೆ ಹೋಗುವ ಎಂದು ಕರೆದುಕೊಂಡು ಹೋಗಿದ್ದು, ಅಲ್ಲಿಯಾರೂ ಇರಲಿಲ್ಲ  ಆ ಮನೆಗೆ ಪತ್ನಿಯನ್ನು ಕರೆದುಕೊಂಡುಹೋದ ಆರಿಫ್ ಪತ್ನಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ.

ಹಲ್ಲೆಯ ತೀವ್ರತೆಗೆ ಆಕೆಯ ಕಾಲು ಮುರಿದಿದ್ದು ಮೈಮೇಲೆ ಗಾಯಗಳಾಗಿದೆ. ಇದೀಗ ಆಕೆ ಬೆಳ್ತಂಗಡಿ ಸರಕರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ