ದಿಲ್ಲಿ ಸಿಎಂ ಆಗಿ ಅತಿಶಿ ಅವರ ಮೊದಲ ನಿರ್ಧಾರ ಪ್ರಕಟ: ಕಾರ್ಮಿಕರಿಗೆ ಕನಿಷ್ಠ ವೇತನ ಹೆಚ್ಚಳ
ದೆಹಲಿ ಮುಖ್ಯಮಂತ್ರಿ ಅತಿಶಿ ಮತ್ತು ಕಾರ್ಮಿಕ ಸಚಿವ ಮುಖೇಶ್ ಅಹ್ಲಾವತ್ ಬುಧವಾರ ಕನಿಷ್ಠ ಕಾರ್ಮಿಕರ ವೇತನದ ಬೆಲೆ ಏರಿಕೆಗೆ ಅಧಿಸೂಚನೆ ಹೊರಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಿಷ್ಠ ವೇತನವನ್ನು ಹೆಚ್ಚಿಸುವುದಾಗಿ ಘೋಷಿಸಿದರು, ಹೊಸ ದರಗಳನ್ನು ಕೌಶಲ್ಯರಹಿತ ಕಾರ್ಮಿಕರಿಗೆ 18,066 ರೂ., ಅರೆ ಕುಶಲ ಕಾರ್ಮಿಕರಿಗೆ 19,929 ರೂ., ಮತ್ತು ನುರಿತ ಕಾರ್ಮಿಕರಿಗೆ ತಿಂಗಳಿಗೆ 21,917 ರೂಪಾಯಿ ಆಗಿದೆ ಅಂದರು.
ಕೌಶಲ್ಯರಹಿತ ಕಾರ್ಮಿಕರಿಗೆ ಕನಿಷ್ಠ ವೇತನವನ್ನು 18,066 ರೂ.ಗೆ, ಅರೆ ಕುಶಲ ಕಾರ್ಮಿಕರಿಗೆ 19,929 ರೂ.ಗೆ ಮತ್ತು ನುರಿತ ಕಾರ್ಮಿಕರಿಗೆ 21,917 ರೂ.ಗೆ ಹೆಚ್ಚಿಸಲಾಗುವುದು ಎಂದು ಅತಿಶಿ ಹೇಳಿದರು.
ಪ್ರಸ್ತುತ ಕೌಶಲ್ಯರಹಿತ ಕಾರ್ಮಿಕರಿಗೆ 17,494 ರೂ., ಅರೆ ಕುಶಲ ಕಾರ್ಮಿಕರಿಗೆ 19,279 ರೂ., ಕುಶಲ ಕಾರ್ಮಿಕರಿಗೆ 21,215 ರೂ.ಆಗಿದೆ.
2016-17ರ ಅವಧಿಯಲ್ಲಿ ದೆಹಲಿ ಸರ್ಕಾರವು ಕನಿಷ್ಠ ವೇತನವನ್ನು ಹೆಚ್ಚಿಸುವ ಬಗ್ಗೆ ಮಾತನಾಡಿತ್ತು. ಆದರೆ ಬಿಜೆಪಿ ನಮ್ಮನ್ನು ತಡೆದಿದೆ ಎಂದು ಎಪಿಪಿ ನಾಯಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth