‘ರಕ್ತದಲ್ಲಿ ಮುಳುಗಿದ್ದ ವ್ಯಕ್ತಿ ಸೈಫ್ ಅಲಿ ಖಾನ್ ಎಂದು ನನಗೆ ತಿಳಿದಿರಲಿಲ್ಲ’ ಆಸ್ಪತ್ರೆಗೆ ಕರೆದುಕೊಂಡು ಹೋದ ಆಟೋ ಚಾಲಕನ ಹೇಳಿಕೆ

ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ಮುಂಬೈನ ತಮ್ಮ ಐಷಾರಾಮಿ ನಿವಾಸದಲ್ಲಿ ಗುರುವಾರ ಮುಂಜಾನೆ ದರೋಡೆಕೋರನಿಂದ ಚೂರಿ ಇರಿತಕ್ಕೊಳಗಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಸೈಫ್ ಅಲಿ ಖಾನ್ ಅವರ ಕುತ್ತಿಗೆಗೆ 2.5 ಇಂಚಿನ ಬ್ಲೇಡ್ ತುಂಡಿನಿಂದ ಆರು ಬಾರಿ ಚುಚ್ಚಲಾಗಿತ್ತು. ನಂತರ ಐದು ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ನಂತರ ಅವರ ಬೆನ್ನುಮೂಳೆಯಿಂದ ಅದನ್ನು ತೆಗೆದುಹಾಕಲಾಯಿತು. ಹಿರಿಯ ಮಗ ಇಬ್ರಾಹಿಂ ಅಲಿ ಖಾನ್ ಅವರೊಂದಿಗೆ ಆಟೋ ರಿಕ್ಷಾದಲ್ಲಿ ಅವರನ್ನು ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ವರದಿಯಾಗಿದೆ. ಈ ಮಧ್ಯೆ ಮಾಧ್ಯಮ ಸಂವಾದದಲ್ಲಿ, ಆಟೋ ಚಾಲಕ ‘ರಕ್ತಸಿಕ್ತ ಕುರ್ತಾ ಹೊಂದಿರುವ ಪ್ರಯಾಣಿಕನನ್ನು’ ಬಾಂದ್ರಾ ಆಸ್ಪತ್ರೆಗೆ ಡ್ರಾಪ್ ಮಾಡಿದ ರಾತ್ರಿಯನ್ನು ನೆನಪಿಸಿಕೊಂಡಿದ್ದಾರೆ. ಆ ವ್ಯಕ್ತಿ ಸೈಫ್ ಅಲಿ ಖಾನ್ ಎಂದು ತಿಳಿದಿರಲಿಲ್ಲ’ ಎಂದು ಹೇಳಿದ್ದಾರೆ.
“ನಾವು ಆಸ್ಪತ್ರೆಯ ಗೇಟ್ ತಲುಪಿದಾಗ ಮಾತ್ರ ಅವರು ಸ್ಟ್ರೆಚರ್ ತರಲು ಗಾರ್ಡ್ ಗೆ ಕರೆ ಮಾಡಿದರು. ಅವರು ಸೈಫ್ ಅಲಿ ಖಾನ್ ಎಂದು ಹೇಳಿದರು” ಎಂದು ಆಟೋ ರಿಕ್ಷಾ ಚಾಲಕ ಭಜನ್ ಸಿಂಗ್ ರಾಣಾ ಶುಕ್ರವಾರ ಮುಂಬೈನಲ್ಲಿ ಸುದ್ದಿಗಾರರಿಗೆ ತಿಳಿಸಿದರು. ನಟ ವಾಸಿಸುತ್ತಿದ್ದ ಸದ್ಗುರು ದರ್ಶನ ಕಟ್ಟಡದ ಮೂಲಕ ಹಾದುಹೋಗುತ್ತಿದ್ದಾಗ ಓರ್ವ ಮಹಿಳೆ ಮತ್ತು ಇತರರು ತಮ್ಮ ರಿಕ್ಷಾವನ್ನು ನಿಲ್ಲಿಸುವಂತೆ ಸಂಕೇತ ನೀಡಿದರು ಎಂದು ಅವರು ನೆನಪಿಸಿಕೊಂಡರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj