ನಾಗೇಶ್… ಮಾತಾಡೋದಿದ್ರೆ ಹೊರಗೆ ಹೋಗಿ: ವೇದಿಕೆಯಲ್ಲಿ ಬಿ.ಸಿ.ನಾಗೇಶ್ ವಿರುದ್ಧ ಸಿಎಂ ಗರಂ
ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿರುದ್ಧ ವೇದಿಕೆಯಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಅರಮನೆ ಮೈದಾನದ ಗಾಯತ್ರಿ ವಿಹಾರದ ಕಾರ್ಯಕ್ರಮದಲ್ಲಿ ನಡೆದಿದೆ.
ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಒಳನಾಡು ಮೀನುಗಾರಿಕೆ ಸಮಾವೇಶ ನಡೆಯುತ್ತಿತ್ತು. ವೇದಿಕೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಭಾಷಣ ಮಾಡುತ್ತಿದ್ದರೆ, ಸಚಿವ ಬಿ.ಸಿ.ನಾಗೇಶ್ ತಮ್ಮ ಪಕ್ಕದಲ್ಲಿ ಕುಳಿತಿದ್ದವರ ಬಳಿಯಲ್ಲಿ ಮಾತಕತೆ ನಡೆಸೋದ್ರಲ್ಲೇ ಬ್ಯುಸಿಯಾಗಿದ್ದರು.
ಗಂಭೀರವಾದ ವಿಷಯದ ಕುರಿತು ಸಿಎಂ ಭಾಷಣ ಮಾಡುತ್ತಿದ್ದರೂ ಬಿ.ಸಿ.ನಾಗೇಶ್ ನಿರಂತರ ಮಾತುಕತೆಯಲ್ಲಿ ತೊಡಗಿರುವುದನ್ನು ಸಿಎಂ ಹಲವು ಸಲ ಗಮನಿಸಿದರು. ಕೊನೆಗೆ ತಾಳ್ಮೆ ಕಳೆದುಕೊಂಡು, ನಾಗೇಶ್… ಒಂದು ನಿಮಿಷ, ನಿಮಗೆ ಮಾತನಾಡುವುದಿದ್ದರೆ, ಹೊರಗೆ ಹೋಗಿ ಮಾತನಾಡಬಹುದು, ಐದು ನಿಮಿಷ ನಾನು ಮುಗಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಸಿಎಂ ಬಸವರಾಜ್ ಬೊಮ್ಮಾಯಿ ಈ ಹಿಂದೆ, ವೇದಿಕೆಯಲ್ಲಿ ಪ್ರತಾಪ್ ಸಿಂಹ ಮೇಲೆಯೂ ಅಸಮಾಧಾನ ವ್ಯಕ್ತಪಡಿಸಿದ್ದರು. ಎಲ್ಲರ ಜೊತೆಗೂ ಬೆರೆಯುವ ಸಿಎಂ ಬೊಮ್ಮಾಯಿ ಅವರ ಗುಣವನ್ನು ಸಚಿವರು, ಬಿಜೆಪಿ ಜನಪ್ರತಿನಿಧಿಗಳು ಹಗುರವಾಗಿ ಪರಿಗಣಿಸುತ್ತಿದ್ದಾರೆ ಅನ್ನೋ ಮಾತುಗಳು ಅಂದು ಕೇಳಿ ಬಂದಿತ್ತು. ಇಂದು ಬಿ.ಸಿ.ನಾಗೇಶ್ ಅವರ ವರ್ತನೆಗೆ ಕೂಡ ಸಿಎಂ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಮಾತನಾಡುತ್ತಿರುವ ವೇಳೆಯಾದ್ರೂ ವೇದಿಕೆಯ ಶಿಸ್ತಿಗೆ ಬೆಲೆ ಕೊಡೋದು ಬೇಡ್ವಾ? ಸಚಿವರಾದವರಿಗೆ ಕನಿಷ್ಠ ಅಷ್ಟಾದ್ರೂ ಪ್ರಜ್ಞೆ ಬೇಡ್ವಾ? ಅನ್ನೋ ಮಾತುಗಳು ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka