ಬಾಬರಿ ಮಸೀದಿ ತೀರ್ಪು: ಡಿವೈ ಚಂದ್ರಚೂಡ್ ತೀರ್ಪು ಅತ್ಯಂತ ನಿರಾಶಾಜನಕವಾಗಿತ್ತು; ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ಹೇಳಿಕೆ - Mahanayaka

ಬಾಬರಿ ಮಸೀದಿ ತೀರ್ಪು: ಡಿವೈ ಚಂದ್ರಚೂಡ್ ತೀರ್ಪು ಅತ್ಯಂತ ನಿರಾಶಾಜನಕವಾಗಿತ್ತು; ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ಹೇಳಿಕೆ

03/12/2024

ಬಾಬರಿ ಮಸೀದಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಾಧೀಶ ಡಿ.ವೈ ಚಂದ್ರಚೂಡ್ ಅವರ ತೀರ್ಪು ಅತ್ಯಂತ ನಿರಾಶಾಜನಕವಾಗಿತ್ತು ಎಂದು ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜಿಬ್ ಜಂಗ್ ಹೇಳಿದ್ದಾರೆ. ಅವರ ಈ ತೀರ್ಪು ದೇಶದಲ್ಲಿ ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸುವುದಕ್ಕೆ ಹೇತುವಾಯಿತು ಎಂದು ಕೂಡ ಅವರು ಹೇಳಿದ್ದಾರೆ. ಶಬಾನೋ ಪ್ರಕರಣದಲ್ಲಿ ರಾಜೀವ್ ಗಾಂಧಿಯವರು ತೆಗೆದುಕೊಂಡ ನಿಲುವು ರಾಮ ಜನ್ಮಭೂಮಿ ಅಭಿಯಾನವು ತೀವ್ರಗೊಳ್ಳುವುದಕ್ಕೆ ಕಾರಣವಾಯಿತು ಎಂದೂ ಅವರು ಹೇಳಿದ್ದಾರೆ.

ಬಾಬರಿ ಮಸೀದಿಗೆ ಸಂಬಂಧಿಸಿದ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಲಾದ ಅರ್ಜಿಗೆ ಸಂಬಂಧಿಸಿ ಚಂದ್ರ ಚೂಡ್ ಅವರ ತೀರ್ಪನ್ನು ಅಸಿಂಧುಗೊಳಿಸದೆ ಇದ್ದರೆ ಸಮಸ್ಯೆ ಇಲ್ಲಿಗೇ ಕೊನೆಗೊಳ್ಳುವ ಸಾಧ್ಯತೆ ಇಲ್ಲ. ವಿವಾದಿತವೆಂದು ಗುರುತಿಸಿಕೊಂಡ 1800 ರಷ್ಟು ಮಸೀದಿಗಳು ಈ ದೇಶದಲ್ಲಿ ಇವೆ ಎಂದು ಜಂಗ್ ಹೇಳಿದ್ದಾರೆ. ಇಂತಹ ವಿವಾದಗಳು ಈ ದೇಶದ ಆರ್ಥಿಕ ಬೆಳವಣಿಗೆಗೆ ಕಿಂಚಿತ್ತೂ ಸಹಾಯವನ್ನು ಮಾಡದು ಎಂದೂ ಅವರು ಹೇಳಿದ್ದಾರೆ.


ADS

ರಾಮಜನ್ಮಭೂಮಿ ಪ್ರಕರಣ 100 ವರ್ಷಗಳಿಗಿಂತ ಹಳೆಯದಾಗಿತ್ತು. ಶಾಬಾನೋ ಪ್ರಕರಣದಲ್ಲಿ ರಾಜೀವ್ ಗಾಂಧಿ ತೆಗೆದುಕೊಂಡು ನಿಲುವಿನ ಬಳಿಕ ಅದು ತೀವ್ರ ಸ್ವರೂಪವನ್ನು ಪಡೆಯಿತು ಎಂದವರು ವಿಶ್ಲೇಷಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ