ಬಾಲ ಭೀಮನಿಗೆ ಅಂಬೇಡ್ಕರ್ ಗುರುಗಳು ನೀಡಿದ ಆ ಉಡುಗೊರೆ - Mahanayaka

ಬಾಲ ಭೀಮನಿಗೆ ಅಂಬೇಡ್ಕರ್ ಗುರುಗಳು ನೀಡಿದ ಆ ಉಡುಗೊರೆ

17/10/2020

ಅಂಬೇಡ್ಕರ್ ಗುರುಗಳು ತರಗತಿಯಲ್ಲಿ ಪರೀಕ್ಷೆ ಪಾರ್ಮ್ ತುಂಬಿಸಲು ಹೇಳುತ್ತಾರೆ.  ಹಾಗೆಯೇ ಫಾರ್ಮ್ ನಲ್ಲಿ ವಿದ್ಯಾರ್ಥಿಗಳು ಪೂರ್ಣ ಹೆಸರನ್ನು ಬರೆಯಬೇಕು ಎಂದು ಹೇಳುತ್ತಾರೆ. “ನಿಮ್ಮ ಹೆಸರು, ನಿಮ್ಮ ತಂದೆಯ ಹೆಸರು, ನಿಮ್ಮ ಸರ್ ನೇಮ್, ಅಂದರೆ ನಿಮ್ಮ ಉಪನಾಮ ಬರೆಯಬೇಕು” ಜೀವನ ಪೂರ್ತಿ ನೀವು ಇದೇ ಹೆಸರಿನಿಂದ ಗುರುತಿಸಿಕೊಳ್ಳುತ್ತೀರಿ ಎಂದು ಹೇಳುತ್ತಾರೆ.

ನಿಮ್ಮ ತಂದೆಯ ಹೆಸರು, ನಿಮ್ಮ ಹೆಸರು, ನಿಮ್ಮ ಕುಲದ ಹೆಸರಿನಿಂದಲೇ ಎಲ್ಲರೂ ನಿಮ್ಮನ್ನು ಗುರುತಿಸುತ್ತಾರೆ ಎಂದು ಅಂಬೇಡ್ಕರ್ ಗುರುಗಳು ಹೇಳುತ್ತಾರೆ. ಈ ಸಂದರ್ಭದಲ್ಲಿ ಬಾಲ ಭೀಮನಿಗೆ ತನ್ನ ಹೆಸರು ಹೇಗೆ ಬರೆಯಬೇಕು ಎಂಬ ಬಗ್ಗೆ ಗೊಂದಲವಾಗುತ್ತದೆ. ಸಮೀಪದಲ್ಲಿದ್ದ ತನ್ನ ಅಣ್ಣ ಆನಂದನನ್ನು ಕರೆದು ಏನು ಬರೆಯೋಣ ಎಂದು ಬಾಲ ಭೀಮ ಕೇಳುತ್ತಾನೆ. ನನ್ನ ಹೆಸರು ಭೀಮ್ ರಾವ್, ಅಪ್ಪನ ಹೆಸರು ರಾಮ್ ಜಿ ಸಕ್ಪಾಲ್ ಹಾಗಿದ್ರೆ ನನ್ನ ಪೂರ್ತಿ ಹೆಸರು ಭೀಮ್ ರಾವ್ ರಾಮ್ ಜಿ ಸಕ್ಪಾಲ್ ಎಂದು ಹೇಳುತ್ತಿರುವಾಗಲೇ, ಸರಿ ಹಾಗಿದ್ದರೆ ಅದನ್ನೇ ಬರೆಯೋಣ ಎಂದು ಆನಂದ ಹೇಳುತ್ತಾನೆ. ಆಗ ಇರಣ್ಣ ಈಗ ಬರೆಯಬೇಡ, ಅಪ್ಪ ಹೇಳುತ್ತಿದ್ದರು ಸಕ್ಪಾಲ್ ಜಾಗದಲ್ಲಿ ಅಂಬಾವಾಡೆಕರ್(ಜಾತಿ) ಹೆಸರು ಬರೆಯಿರಿ ಅಂತ ಎಂದು ಹೇಳುತ್ತಾನೆ.

ಈ ವಾದಗಳನ್ನು ಗಮನಿಸುತ್ತಿದ್ದ ಅಂಬೇಡ್ಕರ್ ಗುರುಗಳು ಏನಾಯಿತು ಎಂದು ಭೀಮನ ಬಳಿಯಲ್ಲಿ ಕೇಳುತ್ತಾರೆ. ಆಗ ಬಾಲ ಭೀಮ, ಪೂರ್ತಿ ಹೆಸರು ಏನೆಂದು ಬರೆಯಬೇಕು? ಭೀಮ್ ರಾವ್ ರಾಮ್ ಜಿ ಅಂಬಾವಾಡೆಕರ್? ಎಂದೇ ಎಂದು ಪ್ರಶ್ನಿಸುತ್ತಾನೆ. ಆ ವೇಳೆ ಇತರ ವಿದ್ಯಾರ್ಥಿಗಳು ಜೋರಾಗಿ ನಕ್ಕು ಬಾಲ ಭೀಮನನ್ನು ಹೀಯಾಳಿಸುತ್ತಾರೆ. ಈ ವೇಳೆ ಅಂಬೇಡ್ಕರ್ ಗುರುಗಳು ಬಹಳಷ್ಟು ಯೋಚಿಸುತ್ತಾರೆ. ಬಳಿಕ, ನಿನ್ನ ಪೂರ್ಣ ಹೆಸರನ್ನು ಭೀಮ್ ರಾವ್ ರಾಮ್ ಜಿ ಅಂಬೇಡ್ಕರ್ ಎಂದು ಬರೆ ಎಂದು ಹೇಳುತ್ತಾರೆ. ಆ ವೇಳೇ ಇಡೀ ತರಗತಿಯೇ ಸ್ಥಬ್ತವಾಗಿ ಹೋಗುತ್ತದೆ. ಬಾಲ ಭೀಮನನ್ನು ಹೀಯಾಳಿಸಿದ ಎಲ್ಲ ವಿದ್ಯಾರ್ಥಿಗಳು ಶಾಕ್ ಆಗಿ ಬಾಲ ಭೀಮನ ಕಡೆಗೆ ನೋಡುತ್ತಾರೆ.

“ಅಂಬೇಡ್ಕರ್ ನಿಮ್ಮ ಉಪನಾಮ ಅಲ್ಲವೇ ನಾನು ಹೇಗೆ ಆ ಹೆಸರನ್ನು ಸೇರಿಸಿಕೊಳ್ಳಲಿ” ಎಂದು ಬಾಲ ಭೀಮ ಪ್ರಶ್ನಿಸುತ್ತಾನೆ. “ಸೇರಿಸಿ ಕೋ, ನಿನ್ನ ಗುರುಗಳು ನಿನಗೆ ನೀಡುತ್ತಿರುವ ಉಡುಗೊರೆ ಎಂದು ತಿಳಿದುಕೋ, ಜೀವನದಲ್ಲಿ ಹೀಗಾದರೂ ನಿನ್ನ ಗುರುಗಳನ್ನು ನೀನು ನೆನೆಸಿಕೊಳ್ಳುತ್ತಿಯಾ ಅಲ್ವಾ?” ಎಂದು ಹೇಳುತ್ತಾರೆ.

“ನೋಡು ಭೀಮಾ, ಅಂಬಾವಾಡೆಕರ್ ಹೆಸರಿನಿಂದ ಮಕ್ಕಳು ಹೇಗೆ ನಿನ್ನನ್ನು ರೇಗಿಸುತ್ತಿದ್ದಾರೆ ಎಂದು ನೀನೇ ಹೇಳುತ್ತಿದ್ದೀಯಾ ಅಲ್ವಾ? ಜೀವನ ಪೂರ್ತಿ ಈ ಜನರು ನಿನ್ನನ್ನು ಹೀಗೆಯೇ ರೇಗಿಸುತ್ತಿರಬೇಕೇ? ಎಂದು ಪ್ರಶ್ನಿಸುತ್ತಾರೆ ಹೀಗೆ  ಭೀಮ್ ರಾವ್ ರಾಮ್ ಜೀ ಅಂಬಾವಾಡೆಕರ್ ಹೆಸರಿನಿಂದ ಗುರುತಿಸಿಕೊಳ್ಳಬೇಕಾಗಿದ್ದ, ಡಾ.ಬಿ.ಆರ್.ಅಂಬೇಡ್ಕರ್ ಅವರು, ತಮ್ಮ ಅಂಬೇಡ್ಕರ್ ಗುರುಗಳ ಕೊಡುಗೆಯಿಂದ ಮುಂದೆ ಭೀಮ್ ರಾವ್ ರಾಮ್ ಜೀ ಅಂಬೇಡ್ಕರ್ ಆಗಿ ಗುರುತಿಸಿಕೊಳ್ಳುತ್ತಾರೆ.

 

ಇತ್ತೀಚಿನ ಸುದ್ದಿ