ಪೋಷಕರು ಮಕ್ಕಳಿಗೆ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ: ಫಾ.ಮಾರ್ಸೆಲ್ ಪಿಂಟೊ | ಬಣಕಲ್ ನಜರೆತ್ ಶಾಲೆಯ ವಾರ್ಷಿಕೋತ್ಸವ - Mahanayaka
4:35 AM Saturday 18 - January 2025

ಪೋಷಕರು ಮಕ್ಕಳಿಗೆ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ: ಫಾ.ಮಾರ್ಸೆಲ್ ಪಿಂಟೊ | ಬಣಕಲ್ ನಜರೆತ್ ಶಾಲೆಯ ವಾರ್ಷಿಕೋತ್ಸವ

banakal
25/12/2024

ಕೊಟ್ಟಿಗೆಹಾರ: ಪೋಷಕರು ಮಕ್ಕಳಿಗೆ ಆಸ್ತಿ ಮಾಡಿ ಇಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು  ಚಿಕ್ಕಮಗಳೂರು ಸಂತ ಜೋಸೆಫರ  ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಫಾ.ಮಾರ್ಸೆಲ್ ಪಿಂಟೊ ಹೇಳಿದರು.

ಅವರು ಸೋಮವಾರ ರಾತ್ರಿ ಬಣಕಲ್ ನಜರೆತ್ ಶಾಲೆಯ (ನಜ್ ಉತ್ಸವ) 27ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ADS

‘ಪೋಷಕರು ಮಕ್ಕಳ ಅಭಿರುಚಿಗೆ ತಕ್ಕಂತೆ ಶಿಕ್ಷಣ ನೀಡಿ ಮಕ್ಕಳ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ನೀಡಿ ಅವರನ್ನೇ ಆಸ್ತಿಯನ್ನಾಗಿ ಮಾಡಿದರೆ ಮುಂದೆ ಅವರು ಬುದ್ದಿ ಶಕ್ತಿ, ಜ್ಞಾನ,ವಿವೇಕದಿಂದ ನಡೆದು ಅವರು ಉತ್ತುಂಗ ರೀತಿಯಲ್ಲಿ ಬೆಳೆಯಲು ಸಾಧ್ಯವಾಗುತ್ತದೆ.ನಿಮ್ಮ ಮಗುವಿನ ಆಗುಹೋಗುಗಳ ಬಗ್ಗೆ ನೀವು ಅರಿತುಕೊಂಡು ಅವರಿಗೆ ಶಿಕ್ಷಣ ಕೊಟ್ಟರೆ  ಅವರು ಸ್ವತಂತ್ರರಾಗಿ ಬದುಕುವ ರೀತಿ, ರೂಪುರೇಷೆಗಳು ಅವರಿಗೆ ಉತ್ತಮ ವಾತಾವರಣದಲ್ಲಿ ಜೀವಿಸಲು ಸಾಧ್ಯವಾಗುತ್ತದೆ’ಎಂದರು.

ಹಳೆ ವಿದ್ಯಾರ್ಥಿ ಹಾಗೂ ವೈದ್ಯ ಡಾ.ಶಬರೀಶ್ ಮಾತನಾಡಿ’ಜೀವನದ ಉತ್ತಮ ಮೌಲ್ಯಗಳನ್ನು ಈ ಶಾಲೆ ನನಗೆ ಕಲಿಸಿಕೊಟ್ಟಿದೆ. ಸಂಸ್ಥೆಗೆ ನಾನು ಚಿರಋಣಿಯಾಗಿದ್ದೇನೆ’ಎಂದರು. ಬಣಕಲ್ ಬಾಲಿಕಾ ಮರಿಯ ಚರ್ಚಿನ ಸಹಾಯಕ ಗುರುಗಳಾದ ಫಾ.ಥಾಮಸ್ ಕಲಘಟಗಿ ಕಾರ್ಯಕ್ರಮಕ್ಕೆ ಆಶೀರ್ವಚನ ನೀಡಿದರು.

ಪ್ರಾಂಶುಪಾಲೆ ಸಿಸ್ಟರ್ ಹಿಲ್ಡಾ ಲೋಬೊ ಮಾತನಾಡಿ, ‘ಪೋಷಕರು ಮಕ್ಕಳು ಪರಿಸರ ಸ್ವಚ್ಚತೆಯ ಬಗ್ಗೆ ಅರಿತುಕೊಳ್ಳುವ ಅವಶ್ಯಕತೆಯಿದೆ. ಪರಿಸರ ಸಂರಕ್ಷಣೆಯಿಂದ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ದೊರೆಯಬೇಕು. ಉತ್ತಮ ಆರೋಗ್ಯ ಸಿಗಬೇಕಾದರೆ ಉತ್ತಮ ಆಮ್ಲಜನಕ ಬೇಕು. ಅದು ನಮಗೆ ಮರ,ಗಿಡಗಳ ಸಂರಕ್ಷಣೆಯಿಂದ ಸಿಗುತ್ತದೆ. ಪರಿಸರ ನಮಗೆ ಎಲ್ಲ ಸೌಲಭ್ಯ ನೀಡುತ್ತದೆ. ಅದನ್ನು ನಾವು ಸಂರಕ್ಷಿಸುವುದೇ ಮುಖ್ಯವಾಗುತ್ತದೆ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಪರಿಸರದಲ್ಲಿ ಬಿಸಾಕದೇ ಉತ್ತಮ ಗಿಡಗಳನ್ನು ಪರಿಸರದಲ್ಲಿ ಸ್ವಚ್ಚ ಪರಿಸರ ಉಳಿಸುವ ಅಗತ್ಯವಿದೆ’ಎಂದರು.

ಪಿಟಿಎ ಸದಸ್ಯೆ ಅನಿತಾ ಮಾತನಾಡಿದರು.  ಪರಿಸರ ಉಳಿಸುವ ಬಗ್ಗೆ ಮಕ್ಕಳು ನೃತ್ಯ, ನಾಟಕ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ  ಮನೋರಂಜಿಸಿದರು. ಲವಕುಮಾರ್, ಶಿಕ್ಷಕರಾದ ಪ್ರೆಸಿಲ್ಲಾ, ಡೈನಾ, ಸಾಂಚಿತಾ,ಯಾಸ್ಮಿನ್, ರೇಷ್ಮಾ, ಕೇಸರಿ, ರಜಿನಿ, ಯಾಸ್ಮಿನ್, ಅಭಿಧಾ, ಚಂದನಾ, ಹಲೀಮಾ, ವರ್ಷಾ, ರೇಖಾ, ಅನುಷಾ, ಲಿನ್ಸಿ, ಲಕ್ಷ್ಮಿದೇವಿ, ಬೆನ್ಜಿಟಾ, ರುಕ್ಸಾವಿ, ವಿನುತಾ, ಸಾಂಘವಿ, ಗಾಯತ್ರಿ, ಸೆವ್ರೀನ್, ಅನುಶ್ರೀ, ಐರಿನ್, ಟ್ರೀಜಾ, ಸಿಸ್ಟರ್ಸ್ ಗಳಾದ ಅಮಲ್ ರಾಣಿ, ರಿತಿಕಾ, ಸಬೀನಾ  ಇದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ