ಶೇಖ್ ಹಸೀನಾಗೆ ಆಶ್ರಯ: ಭಾರತದ ವಿರುದ್ಧ ಬಾಂಗ್ಲಾದೇಶದ ವಿರೋಧ ಪಕ್ಷಗಳ ಕೆಂಗಣ್ಣು - Mahanayaka

ಶೇಖ್ ಹಸೀನಾಗೆ ಆಶ್ರಯ: ಭಾರತದ ವಿರುದ್ಧ ಬಾಂಗ್ಲಾದೇಶದ ವಿರೋಧ ಪಕ್ಷಗಳ ಕೆಂಗಣ್ಣು

12/08/2024

ಭಾರತದ ವಿರುದ್ಧ ಬಿಎನ್‌ಪಿ ಸೇರಿದಂತೆ ಬಾಂಗ್ಲಾದೇಶದ ವಿರೋಧ ಪಕ್ಷಗಳು ಸಿಟ್ಟಿಗೆದ್ದಿವೆ. ಶೇಖ್ ಹಸೀನಾ ರನ್ನು ಕೂಡಲೇ ಬಾಂಗ್ಲಾದೇಶಕ್ಕೆ ಹಸ್ತಾಂತರಿಸದಿದ್ದರೆ ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ ಮುತ್ತಿಗೆ ಹಾಕುವುದಾಗಿ ಗಣ ಅಧಿಕಾರ್ ಪರಿಷತ್ ಅಧ್ಯಕ್ಷ ವಿಪಿ ನೂರುಲ್ ಹಕ್ ನೂರ್ ಬೆದರಿಕೆ ಹಾಕಿದ್ದಾರೆ.

ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಆಶ್ರಯ ನೀಡಿದ ಭಾರತದ ವಿರುದ್ಧ ಬಿಎನ್‌ಪಿ ಸೇರಿದಂತೆ ಬಾಂಗ್ಲಾದೇಶದ ವಿರೋಧ ಪಕ್ಷಗಳು ಸಿಟ್ಟಿಗೆದ್ದಿವೆ. ಬಿಎನ್​​ಪಿ ಪ್ರಸ್ತುತ ಮಧ್ಯಂತರ ಸರ್ಕಾರದಲ್ಲಿ ಪ್ರಬಲ ಪ್ರಭಾವ ಹೊಂದಿದೆ.

ಕಳೆದ ಶುಕ್ರವಾರ ಢಾಕಾದಲ್ಲಿ ನಡೆದ ‘ಸಾಮರಸ್ಯ ರ‍್ಯಾಲಿ’ಯಲ್ಲಿ ಮಾತನಾಡಿದ ಗಣ ಅಧಿಕಾರ್ ಪರಿಷತ್ ಅಧ್ಯಕ್ಷ ವಿಪಿ ನೂರುಲ್ ಹಕ್ ನೂರ್, ‘ಭಾರತದೊಂದಿಗೆ ಕೈದಿಗಳ ವಿನಿಮಯ ಒಪ್ಪಂದ ಮಾಡಿಕೊಂಡಿದ್ದೇವೆ. ಶೇಖ್ ಹಸೀನಾಳನ್ನು ಬೇರೆ ದೇಶಗಳಿಗೆ ಕಳುಹಿಸುವ ಬದಲು ಕೂಡಲೇ ಬಾಂಗ್ಲಾದೇಶಕ್ಕೆ ಕಳುಹಿಸಬೇಕು. ಇಲ್ಲವಾದಲ್ಲಿ ಭಾರತೀಯ ಹೈಕಮಿಷನರ್ ರನ್ನು ಪೀಪಲ್ಸ್ ರೈಟ್ಸ್ ಕೌನ್ಸಿಲ್ ಸುತ್ತುವರೆದಿರುತ್ತದೆ ಎಂದು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ